ಜಿಲ್ಲಾದ್ಯಂತ ದೀಪಾವಳಿ ಸಂಭ್ರಮ: ಹೂ,ಹಣ್ಣು ಖರೀದಿ ಬಲು ಜೋರು

oplus_2
oplus_2
Published on

ರಾಯಚೂರು: ದೀಪಾವಳಿ ಹಬ್ಬಕ್ಕೆ ಜಿಲ್ಲಾದ್ಯಂತ ಪೂಜಾ ಸಾಮಾಗ್ರಿ, ಹೂ, ಹಣ್ಣು, ಬಟ್ಟೆ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ನರಕ ಚತುದರ್ಶಿಯ ದಿನವಾದ ಗುರುವಾರ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂದಣಿ ಕಂಡುಬಂದಿತು.

ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ಪಟಾಕಿ ಖರೀದಿಯಲ್ಲಿ ತೊಡಗಿರುವ ಜನ
ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ಪಟಾಕಿ ಖರೀದಿಯಲ್ಲಿ ತೊಡಗಿರುವ ಜನ

ನಗರದ ಬಂಗೀಕುಂಟಾ, ಸೂಪರ್ ಮಾರ್ಕೇಟ್ ಸೇರಿದಂತೆ ಹಲವೆಡೆ ಹೂ, ಮಾವಿನ ತೋರಣ, ಬಾಳೆದಿಂಡು, ಹಣ್ಣುಗಳ ಖರೀದಿಗೆ ಜನರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಇದಲ್ಲದೇ ನಗರದ ಪ್ರಮುಖ ಬೀದಿಗಳ ಬದಿಯಲ್ಲಿ ಮಣ್ಣಿನಿಂದ ಮಾಡಿದ ಹಣತೆ ರಾಶಿಗಳು ಮಾರಾಟಕ್ಕಿಡಲಾಗಿತ್ತು.

ವ್ಯಾಪಾರಸ್ಥರಿಂದ ಅಂಗಡಿ ಮುಂಗಟ್ಟುಗಳ ಪೂಜೆಗೆ ಹೂವಿನ ಖರೀದಿ ಹೆಚ್ಚಾಗಿ ನಡೆಯಿತು.

ಬೆಳಕಿನ ಹಬ್ಬದ ಹಿನ್ನೆಲೆ ಮಕ್ಕಳು ಮತ್ತು ಮಹಿಳೆಯರು ಬಟ್ಟೆ ಖರೀದಿಗೆ ಮುಂದಾದರು. ಮನೆಯ ಮುಂದೆ ಹಾಕಲು ರಂಗೋಲಿ, ಅಲಂಕಾರಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿ ಸರಾಫ್ ಬಜಾರ್‌ನಲ್ಲಿ ಜೋರಾಗಿ ನಡೆಯಿತು.

ಚೆಂಡು ಹೂವಿಗೆ ಭಾರಿ ಬೇಡಿಕೆಯಿದ್ದು, ನಗರದ ಸರಾಫ್ ಬಜಾರ್‌ನಲ್ಲಿ ರಸ್ತೆಯುದ್ದಕ್ಕೂ ಚೆಂಡು ಹೂ ಮಾರಾಟ ಮಾಡಲಾಯಿತು. ನಗರದ ಬಸವೇಶ್ವರ ವೃತ್ತದ ಸಮೀಪ ಸುತ್ತಲಿನ ಗ್ರಾಮಗಳಿಂದ ರೈತರು ಟ್ರಾೃಕ್ಟರ್‌ಗಳಲ್ಲಿ ಚೆಂಡು ಹೂವವನ್ನು ತಂದು ಮಾರಾಟ ಮಾಡಿದರು.

ಪಟಾಕಿ ಮಾರಾಟಕ್ಕಾಗಿ ನಗರದ ವಾಲ್ಕಟ್ ಮೈದಾನದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 38 ಪಟಾಕಿ ಅಂಗಡಿಗಳಲ್ಲಿ ಪಟಾಕಿ ಮಾರಾಟ ಭರ್ಜರಿಯಾಗಿತ್ತು.

ರಾಯಚೂರಿನ ಸರಾಫ್ ಬಜಾರ್‌ನ ಅಂಗಡಿಯೊಂದರಲ್ಲಿ‌ ಮಾರಾಟಕ್ಕಿಟ್ಟಿರುವ ಕನ್ನಡ ಬಾವುಟಗಳು
ರಾಯಚೂರಿನ ಸರಾಫ್ ಬಜಾರ್‌ನ ಅಂಗಡಿಯೊಂದರಲ್ಲಿ‌ ಮಾರಾಟಕ್ಕಿಟ್ಟಿರುವ ಕನ್ನಡ ಬಾವುಟಗಳು

ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಒಂದೇ ದಿನ ಬಂದಿರುವ ಕಾರಣ ನಗರದ ಸರಾಫ್ ಬಜಾರ್ ಅಂಗಡಿಯೊಂದರಲ್ಲಿ ದೀಪಾವಳಿ ಅಲಂಕಾರಿಕ ಸಾಮಾಗ್ರಿಗಳ ಜತೆಗೆ ಕನ್ನಡ ಭಾವುಟಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net