ಫೆ.೦೯ ರಂದು ದುರ್ಗಾ ಜಗದೀಶರ ಸಂಶೋಧನೆಗಳು ಕೃತಿ ಲೋಕಾರ್ಪಣೆ

Published on
  • ರಾಯಚೂರು
    ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೋಟೆ ಅಧ್ಯಯನ ಸಮಿತಿಗಳ ಸಹಯೋಗದಲ್ಲಿ -É.೯ರಂದು ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸಿö ಸಂಪಾದಿತ ಮರೆಯಲಾಗದ ಸಂಶೋಧಕದುರ್ಗಾ ಜಗದೀಶ ಮತ್ತು ದುರ್ಗಾ ಜಗದೀಶರ ಸಂಶೋಧನೆಗಳು ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ ಕನ್ನಡ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ತಾರಕೇಶ ದುರ್ಗಾ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಮಠಮಾರಿ ಬಿಜ್ಜಾಲಿ ಮಠದ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹೀರೆಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಲಿದ್ದಾರೆ.

ಕೋಟೆ ಅಧ್ಯಯನ ಸಮಿತಿ ಗೌರವಾಧ್ಯಕ್ಷ ಹಾಗೂ ನಗರಸಭೆ ಹಿರಿಯ ಸದಸ್ಯ ಜಯಣ್ಣ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ವಹಿಸಲಿದ್ದಾರೆ. ದುರ್ಗಾ ಜಗದೀಶರ ಸಂಶೋಧನೆಗಳ ಕೃತಿಯ ಕುರಿತು ಸಂಶೋಧಕ ಡಾ.ಚನ್ನಬಸವ ಹೀರೆಮಠ ಮತ್ತು ಮರೆಯಲಾಗದ ಸಂಶೋಧಕ ದುರ್ಗಾಜಗದೀಶ ಕೃತಿಯ ಕುರಿತು ಉಪನ್ಯಾಸಕ ಮಂಜುನಾಥ ಐಲಿ ಪರಿಚಯಲಿದ್ದಾರೆ.  ಕೋಟೆ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಸತ್ಯನಾರಾಯಣ, ಕೃತಿ ಕರ್ತೃ ಲಕ್ಷ್ಮೀದೇವಿ ಶಾಸಿö, ಶರಣಮ್ಮ ದುರ್ಗಾ ಜಗದೀಶ, ಕೃತಿಗಳ ಪ್ರಕಾಶಕ ವಿಶ್ವನಾಥ ಶಾಸಿö ಭಾಗವಹಿಸಲಿದ್ದಾರೆ ಎಂದರು.

 ಈ ಸಂದರ್ಭದಲ್ಲಿ ಲಕ್ಷ್ಮಿದೇವಿ ಶಾಸಿö, ಶರಣಮ್ಮ ದುರ್ಗಾ ಜಗದೀಶ, ವಿಶ್ವನಾಥ ಶಾಸಿö, ಪ್ರತಿಭಾ ಗೋನಾಳ, ಸೈಯದ್ ಹಫಿಜುಲ್ಲಾ  ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net