ರಾಯಚೂರು ಜಿಲ್ಲೆಯಲ್ಲಿ ಒಂದೇ ದಿನ 39 ಜನರಿಗೆ ಕರೊನಾ ಪಾಸಿಟಿವ್

corona new
Published on

ರಾಯಚೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಾ ಸಾಗಿದೆ. ಶನಿವಾರ 39 ಜನರಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.

ಪತ್ತೆಯಾದ 39 ಸೋಂಕಿತರಲ್ಲಿ 21 ಮಹಿಳೆಯರು ಹಾಗೂ 18 ಪುರುಷರಿದ್ದಾರೆ. ಅವರಲ್ಲಿ ಒಂದು ವರ್ಷದ ಹಾಗೂ ಎರಡು ವರ್ಷ ಮಕ್ಕಳು ಸೇರಿದಂತೆ 10 ವರ್ಷದೊಳಗಿನ ಒಟ್ಟು ಆರು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ. 40 ವರ್ಷ ಮೇಲ್ಪಟ್ಟ ಆರು ಜನ, 50 ವರ್ಷ ಮೇಲ್ಪಟ್ಟ ಮೂವರು, 60 ಹಾಗೂ 70 ವರ್ಷ ಮೇಲ್ಪಟ್ಟ ತಲಾ ಒಬ್ಬರು ಇದ್ದಾರೆ. ಮೇ 18ರಂದು ಜಿಲ್ಲೆಯಲ್ಲಿ ಮೊದಲು ಆರು ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ನಂತರದಲ್ಲಿ ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಲೆ ಸಾಗಿವೆ. ಈವರೆಗೂ ಕೇವಲ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಸೋಂಕು ಕಂಡು ಬಂದಿದ್ದು, ಶನಿವಾರ ಆಂಧ್ರದಿಂದ ಆಗಮಿಸಿದವರಲ್ಲಿಯೂ ಸೋಂಕು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net