

ರಾಯಚೂರು: ವಿದ್ಯುತ್ ತಂತಿ ತಗುಲಿ ತಂದೆ ಮತ್ತು ಮಗ ಸ್ಥಳದಲ್ಲಿಯೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ತಾಲೂಕಿನ ದಿನ್ನಿ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ತಂದೆ ಮಹೇಶ ಆನಂದಪ್ಪ (46) ಮತ್ತು ಮಗ ವಿನೋದ್ ಮಹೇಶ್ (16) ಮೃತರು. ನಿರಂತರ ಮಳೆಯಿಂದಾಗಿ ಮನೆಯಲ್ಲಿ ವಿದ್ಯುತ್ ಸಮಸ್ಯೆಯಾಗಿತ್ತು. ಏನಾಗಿದೆ ಎಂದು ಮಹೇಶ ನೋಡಲು ಹೋದಾಗ ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ತಂದೆ ಕೆಳಗೆ ಬಿದ್ದಿದ್ದನ್ನು ಕಂಡು ಹೋದ ವಿನೋದ್ ಕೂಡಾ ವಿದ್ಯುತ್ ಸಂಪರ್ಕವಾಗಿ ಮೃತಪಟ್ಟಿದ್ದಾನೆ. ಅಕ್ಕಪಕ್ಕದ ಮನೆಯವರೂ ಕಾಪಾಡಲು ಪ್ರಯತ್ನಿಸಿದರೂ ಫಲಿಸಲಿಲ್ಲ.