ಧಾರವಾಡದಲ್ಲಿ ಹುತಾತ್ಮರ ದಿನಾಚರಣೆ ನಾಡಿದ್ದು

raichur prabhakar patil
ಪ್ರಭಾಕರ ಪಾಟೀಲ್
Published on


ರಾಯಚೂರು: ನರಗುಂದ-ನವಲಗುಂದ ರೈತ ಬಂಡಾಯಕ್ಕೆ 43 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಎಂ.ಜಿ.ಹಿರೇಮಠ ಕಲ್ಯಾಣ ಮಂಟಪದಲ್ಲಿ ಜು.21ರಂದು ರೈತ ಹುತಾತ್ಮರ ದಿನಾಚರಣೆ ಮತ್ತು ರೈತ ಚಳವಳಿಯ ಮುಂದಿನ ಹೋರಾಟದ ಘೋಷಣಾ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ತಿಳಿಸಿದರು.

ಇದನ್ನೂ ಓದಿ:

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ 150ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಆಂಧ್ರಪ್ರದೇಶದ ಮಾಜಿ ಸಚಿವ ವಡ್ಡ ಸೋನಾದೀಶ್ವರ ರಾವ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೋರಾಟಗಾರರ ಎಸ್.ಆರ್.ಹಿರೇಮಠ, ವೆಂಕನಗೌಡ ಪಾಟೀಲ್, ಪ್ರಸನ್ನಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಭಾಕರ ಪಾಟೀಲ್ ತಿಳಿಸಿದರು. ಮುಖಂಡ ಬೂದಯ್ಯಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net