ಕಲಿತಾ ಉತ್ಸಾಹವನ್ನು ಹೆಚ್ಚಿಸಲಿದೆ ಪ್ರತಿಭಾ ಕಾರಂಜಿ ಎಂದ ಶಿಕ್ಷಣ ಸಂಯೋಜಕ ಶ್ರೀನಿವಾಸ್

25082022 dvd prtibha karanji
Published on

ದೇವದುರ್ಗ: ಪ್ರತಿಭಾ ಕಾರಂಜಿ ಕಾರ್ಯಕ್ರಮ ಶಾಲೆ ಹಂತದಲ್ಲಿ ಮಕ್ಕಳಲ್ಲಿ ಕಲಿಕಾ ಉತ್ಸಾಹವನ್ನು ಹೆಚ್ಚಿಸುತ್ತದೆ. ಮಕ್ಕಳ ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಶಿಕ್ಷಣ ಸಂಯೋಜಕ ಶ್ರೀನಿವಾಸ್ ಹೇಳಿದರು.

ಬಿಆರ್‌ಪಿ ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಇಂತಹ ಕಾರ್ಯಕ್ರಮಗಳ ಮೂಲಕ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮುಂದಾಗಬೇಕಿದ್ದು, ಪಾಲಕರು ಕೂಡ ಶಿಕ್ಷಕರಿಗೆ ಸಹಕಾರ ನೀಡಬೇಕು. ಆಗ ಮಾತ್ರ ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು.

ಸಿಆರ್‌ಪಿ ಶಿವಾಜಿ, ಶಿಕ್ಷಕರಾದ ತುಳಜಾರಾಮ್, ಮಾನಪ್ಪ, ಬೀರಪ್ಪ ಪೂಜಾರಿ, ಬಾಬು ಹಡಗಲಿ, ಸಿದ್ದಮ್ಮ, ಮಹಾದೇವಿ ಕೇಶಪುರ, ಪವಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net