ಮೊಟ್ಟೆ ಎಸೆದಿದ್ದು ಹೇಡಿಗಳ ಕೃತ್ಯ

22082022 dvd
Published on

ದೇವದುರ್ಗ: ಮಡಿಕೇರಿಯಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಮೊಟ್ಟೆ ವಿತರಣೆ ಮಾಡುವ ಮೂಲಕ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಂಗಡಿಯವರಿಗೆ ಹಾಗೂ ಸಾರ್ವಜನಿಕರಿಗೆ ಮೊಟ್ಟೆ ವಿತರಣೆ ಮಾಡಿದರು. ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಮಾತನಾಡಿ, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಹೇಡಿಗಳ ಕೃತ್ಯವಾಗಿದೆ. ಇದು ಬಿಜೆಪಿ ಹಾಗೂ ಅದರ ಗೂಂಡಾ ಕಾರ್ಯಕರ್ತರು ಮಾಡಿರುವ ಕೃತ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ವ ಸಮುದಾಯಗಳ ನಾಯಕರಾಗಿದ್ದು, ಅವರ ಆಡಳಿತಾವಧಿಯಲ್ಲಿ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂಥ ಧೀಮಂತ ನಾಯಕನಿಗೆ ಬಿಜೆಪಿ ಕಾರ್ಯಕರ್ತರು ಕಪ್ಪುಬಟ್ಟೆ ತೋರಿಸಿ, ಮೊಟ್ಟೆ ಎಸೆದು ಅಪಮಾನ ಮಾಡಿದ್ದಾರೆ. ಇಂಥ ಘಟನೆಗಳು ನಡೆಯದಂತೆ ಸಿದ್ದರಾಮಯ್ಯಗೆ ಸೂಕ್ತ ಭದ್ರತೆ ಒದಗಿಸಬೇಕು. ಗೃಹ ಸಚಿವ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ನಾಗರಾಜ್ ಪಾಟೀಲ್ ನೀಲಗಲ್, ರಂಗಪ್ಪ ಗೋಸಲ್, ಮಾನಪ್ಪ ಮೇಸ್ತ್ರಿ, ವೆಂಕಟೇಶ್ ಮಕ್ತಲ್, ಸುರೇಶ್ ನಾಯಕ ಗೌರಂಪೇಟೆ, ಲಕ್ಷ್ಮಣ್ ಜ್ಯೋತಿ, ಪ್ರಕಾಶ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net