ಸ್ವಚ್ಛತೆಯಿಂದ ಆರೋಗ್ಯ ರಕ್ಷಿಸಿಕೊಳ್ಳಿ

22082022 dvd1
Published on

ದೇವದುರ್ಗ: ಆರೋಗ್ಯವೇ ನಮ್ಮ ಸಂಪತ್ತು ಆಗಬೇಕು. ಈ ಹಿನ್ನೆಲೆಯಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಟಿಎಚ್‌ಒ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನಾಚರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸೊಳ್ಳೆಗಳ ಕಡಿತದಿಂದ ಹಲವು ಮಾರಕ ರೋಗಗಳು ಹರಡುತ್ತಿವೆ. ಮಲೇರಿಯಾ, ಡೆಂಘೆ, ಚಿಕೂನ್ ಗುನ್ಯಾ, ಮೆದುಳು ಜ್ವರ ಹರಡುವ ಸಾಧ್ಯತೆಯಿದೆ. ಹೀಗಾಗಿ ಸೊಳ್ಳೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಸೊಳ್ಳೆ ಪರದೆ ತಪ್ಪದೆ ಉಪಯೋಗಿಸಬೇಕು. ಸ್ವಚ್ಛತೆಯಿಂದ ಸೊಳ್ಳೆಗಳ ಉತ್ಪತ್ತಿ ತಡೆಯಬಹುದು. ಮನೆಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳುವ ಜತೆಗೆ ನೀರಿನ ತೊಟ್ಟಿ, ನೀರು ಸಂಗ್ರಹ ಸ್ಥಳ ಸ್ವಚ್ಛ ಮಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ ಎಂದರು.
ವೈದ್ಯಾಧಿಕಾರಿ ಡಾ.ಆರ್.ಎಸ್.ಹುಲಿಮನಿಗೌಡ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಹಿರೇಮಠ, ಎಂಟಿಎಸ್ ಓಂಕಾರ ಜಾಂತೇಕಾರ್, ಬಿಪಿಎಂ ನಾಗರಾಜ ವರ್ಮಾ, ಬಿಎಚ್‌ಇಒ ಶಿವಪ್ಪ ಭೂಮನಗುಂಡ, ಹನುಮಂತ, ಮೈನುದ್ದೀನ್, ರಾಚನಗೌಡ, ಬಸಪ್ಪ, ರವೀಂದ್ರ, ಪಾರ್ವತಿ, ನೇತ್ರಾ, ಯಲ್ಲಮ್ಮ, ಕಲಾವತಿ, ದೀಪಿಕಾ ಬನ್ನಿಗಿಡ, ದೀಪಾ, ಶಿವಗಂಗಾ, ಸುಮಿತ್ರಾ, ತಾಯಮ್ಮ, ರೇಣುಕಾ, ಲಕ್ಷ್ಮೀ ಕೊಪ್ಪರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net