ಸಾಗುವಳಿ ರೈತರಿಗೆ ಭೂ ಮಂಜೂರಾತಿ ನೀಡಿ

AIARLA
Published on

ರಾಯಚೂರು: ಭೂರಹಿತರಿಗೆ, ವಸತಿ ರಹಿತರಿಗೆ ಮನೆ ನಿರ್ಮಾಣ ಸೇರಿದಂತೆ ಕೃಷಿ ಹಾಗೂ ಗ್ರಾಮೀಣ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ(ಎಐಎಆರ್‌ಎಲ್‌ಎ) ಜಿಲ್ಲಾ ಸಮಿತಿ ವತಿಯಿಂದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಮೇಲೆ ಭೂಕಬಳಿಕೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಸರ್ಕಾರದ ನಿರ್ಧಾರ ಖಂಡನೀಯ. ಎಲ್ಲ ಬಗೆಯ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಶೀಘ್ರವೇ ಭೂ ಮಂಜೂರಾತಿ ಆದೇಶ ಹಾಗೂ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಭೂ ಕಬಳಿಕೆ ತಡೆ ಕಾಯ್ದೆಯಡಿ ಸಣ್ಣ ಪುಟ್ಟ ರೈತರ ಮೇಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಪ್ರತಿ ಗ್ರಾಮವಾರು ಸರ್ವೆ ನಡೆಸಿ, ಮನೆ, ನಿವೇಶನ ಹಾಗೂ ಭೂಮಿ ಇಲ್ಲದವರಿಗೆ ಭೂಮಿ ಹಂಚಿಕೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಕೆಲಸವನ್ನು ನೀಡಿ, 600 ರೂ.ಗಳಿಗೆ ಕೂಲಿಯನ್ನು ಹೆಚ್ಚಳ ಮಾಡಬೇಕು. ವೃದ್ಧಾಪ್ಯ, ಅಂಗವಿಕಲರ ಹಾಗೂ ವಿಧವಾ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಪಿ.ಪಿ ಅಪ್ಪಣ್ಣ, ನಾಗರಾಜ್ ಪೂಜಾರ್, ಗಂಗಪ್ಪ ತೋರಣದಿನ್ನಿ, ಚಾಂದಸಾಬ್, ಬಸವರಾಜ್, ಆರ್.ಎಚ್ ಕಲ್ಮಂಗಿ, ಪರಶುರಾಮ್ ಭಂಡಾರಿ, ನರಸಮ್ಮ, ವೀರೇಶ ನಾಯಕ, ಹನುಮಮ್ಮ, ರಾಮಣ್ಣ, ರಂಗಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net