ಅಪರಾಧಕ್ಕೆ ಸಾಮಾಜಿಕ ಮನ್ನಣೆ ಸಲ್ಲ

oplus_2
oplus_2
Published on

ರಾಯಚೂರು: ಗೌರಿ ಲಂಕೇಶ ಹತ್ಯೆಗೈದ ಹಂತಕರಿಗೆ ಅದ್ದೂರಿ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳದಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಡಿಸಿ ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವ ನೀಚ ಕೆಲಸಗಳು ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು ಆದರೆ ಇತ್ತೀಚೆಗೆ ರಾಜ್ಯದಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿದ್ದು, ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡಲಾಗುತ್ತಿದ್ದು, ಇದರಿಂದ ಮಾನವೀಯ ಮೌಲ್ಯಗಳಿಗೆ ಕಳಂಕ ಉಂಟಾಗುತ್ತಿದೆ. ಕೂಡಲೇ ಕೊಲೆಗೆ ಪ್ರಚೋಧಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿಲಾಯಿತು.

ಕೊಲೆ ಪಾತಕರಿಗೆ ಸನ್ಮಾನ ಮಾಡಿರುವುದು ಕರ್ನಾಟಕ ರಾಜ್ಯ, ಮಾನವೀಯತೆ ಹಾಗೂ ದೇಶದ ಸಂವಿಧಾನಕ್ಕೆ ಆಗಿರುವ ಅವಮಾನ. ಇದು ಹಿಂಸೆಗೆ ನೀಡಿರುವ ಬಹಿರಂಗ ಪ್ರಚೋಧನೆಯಾಗಿದೆ. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಲಂಕೇಶ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷ್ಮಣ ಮಂಡಲಗೇರಾ, ಮಾರೆಪ್ಪ ಹರವಿ, ಶ್ರೀನಿವಾಸ್, ಆಂಜನೇಯ, ಶ್ರೀನಿವಾಸ್ ಕೊಪ್ಪರ, ಜಿ.ಅಮರೇಶ, ಖಾಜಾ ಅಸ್ಲಂ, ಕೆ.ಜಿ.ವೀರೇಶ, ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net