ಕ್ರಿಕೆಟ್‌ನಲ್ಲಿ ಪೊಲೀಸ್ ತಂಡಕ್ಕೆ ಗೆಲುವು

IMG-20241130-WA0003
Published on

ರಾಯಚೂರು: ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟದ ಅಂಗವಾಗಿ ಪೊಲೀಸ್ ಇಲಾಖೆ ಹಾಗೂ ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾವಳಿಯು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆಯಿತು.

ಎಸ್ಪಿ ಎಂ.ಪುಟ್ಟಮಾದಯ್ಯ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಪೊಲೀಸ್ ಇಲಾಖೆಯ ಹಾಗೂ ಪತ್ರಕರ್ತರ ತಲಾ ಎರಡು ತಂಡಗಳ ಮಧ್ಯೆ ಸ್ಪರ್ಧೆ ಜರುಗಿತು.

ಪಂದ್ಯಾವಳಿಯಲ್ಲಿ ಎರಡು ತಂಡಗಳು ಅತ್ಯುತ್ತಮ ಪ್ರದರ್ಶನವನ್ನು ತೋರಿದವು. ಪೊಲೀಸ್ ಇಲಾಖೆಯ ಎರಡು ತಂಡಗಳು ಜಯಗಳಿಸಿದ್ದು, ಪತ್ರಕರ್ತರ ತಂಡಗಳು ಸೋತವು.

ಎಎಸ್ಪಿ ಶಿವಕುಮಾರ, ಹರೀಶ, ಡಿಎಸ್ಪಿಗಳಾದ ದತ್ತಾತ್ರೇಯ ಕಾರ್ನಾಡ, ಪ್ರಮಾಣನಂದ ಘೋಡ್ಕೆ, ಸಿಪಿಐಗಳಾದ ಉಮೇಶ ಕಾಂಬ್ಳೆ, ನಾಗರಾಜ ಮೇಕಾ, ಲಿಂಗಪ್ಪ, ಪತ್ರಕರ್ತರಾದ ಆರ್.ಗುರುನಾಥ, ಶಿವಮೂರ್ತಿ ಹಿರೆಮಠ, ಶಿವಪ್ಪ ಮಡಿವಾಳ, ಸಿದ್ದಯ್ಯ ಸ್ವಾಮಿ, ವಿಶ್ವನಾಥ ಹೂಗಾರ, ಭೀಮೇಶ ಪೂಜಾರ, ಜಗನ್ನಾಥ ಪೂಜಾರಿ, ಶ್ರೀಕಾಂತ ಸಾವೂರ್, ದುರುಗೇಶ, ಶ್ರೀನಿವಾಸ, ಖಾದರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net