ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಿ: ಶರಣ ರೆಡ್ಡಿ

SHARANA REDDY
ಶರಣ ರೆಡ್ಡಿ
Published on

ರಾಯಚೂರು:  ಸಿಟಿ ಇಲೆವೆನ್ ಕ್ರಿಕೆಟ್ ಕ್ಲಬ್, ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯ, ವೀರ ಸಾವರ್ಕರ್ ಯೂತ್ ಅಸೋಸಿಯೇಷನ್‌ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಕ್ರಿಕೆಟ್ ಆಟಗಾರ ವಿಜಯ್ ರೆಡ್ಡಿ ಅವರ ತೃತಿಯ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಶರಣ ರೆಡ್ಡಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿ, ಜು.28ರಂದು ಬೆಳಿಗ್ಗೆ 8.30ಕ್ಕೆ ನಗರದ ಎಸ್‌ಸಿಎಬಿ ಕಾನೂನು ಮಹಾವಿದ್ಯಾಲಯ ಆವರಣದಲ್ಲಿ ರಕ್ತದಾನ ಶಿಬಿರ ಜರುಗಲಿದ್ದು, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೆ.ನಿತೀಶ್, ವೈದ್ಯ ವಿ.ಶ್ರೀಧರ್‌ರೆಡ್ಡಿ ಉದ್ಘಾಟಿಸಲಿದ್ದಾರೆ. ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ ಹಾಗೂ ಟಿಎಸ್‌ಎಸ್ ಉಪಾಧ್ಯಕ್ಷ ಪವನ್ ಸುಖಾಣಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ವಿಜಯ್‌ಕುಮಾರ್, ಟಿಎಸ್‌ಎಸ್ ಕಾರ್ಯದರ್ಶಿ ಅಂಭಾಪತಿ, ಮಹಾವಿದ್ಯಾಲಯದ  ಅಧ್ಯಕ್ಷ ವೈ.ಶ್ರೀಕಾಂತ್ ರಾವ್, ಕ್ರೀಡಾ ಇಲಾಖೆಯ ಎಡಿ ವೀರೇಶ ನಾಯಕ್, ಕಾಲೇಜು ಪ್ರಾಚಾರ್ಯೆ ಜೆ.ಪದ್ಮಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಲಬ್‌ನ ಪ್ರಮುಖರಾದ ಭರತ್ ರೆಡ್ಡಿ, ರವಿರಾಜ್, ವೆಂಕಟರೆಡ್ಡಿ, ಎಂ.ವಿಜಯ್‌ಕುಮಾರ್, ಅತಾವುಲ್ಲಾ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net