ಗುಂಡಾ ಕೇಸ್ ಹಿಂಪಡೆಯಿರಿ

SHIVA
Published on

ರಾಯಚೂರು: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜಾಲಹಳ್ಳಿಯ ಶಬ್ಬೀರ್ ಅಹ್ಮದ್ ಮೇಲಿನ ಗೂಂಡಾ ಕೇಸ್ ಹಿಂಡೆಯಲು ಒತ್ತಾಯಿಸಿ ಸಿಪಿಐಎಂ, ಎಸ್‌ಎಫ್‌ಐ ಹಾಗೂ ಕೆಪಿಆರ್‌ಎಸ್ ಸಂಘಟನೆಯಿಂದ ಸ್ಥಳೀಯ ಎಸ್ಪಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ ಊಗಿಬಂಡಿಗೆ ಮನವಿ ಸಲ್ಲಿಸಿ, ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿದು ಹೋರಾಟಗಾರ ಶಬ್ಬೀರ್ ವಿರುದ್ಧ ಗುಂಡಾ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ ಎಂದು ದೂರಿದರು. ಗೂಂಡಾ ಕಾಯ್ದೆಯಡಿ ಇರುವ ಆರೋಪಿಗಳನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿರುವುದರ ಭಾಗವಾಗಿ ಜಾಲಹಳ್ಳಿ ಠಾಣೆಯ ಪೊಲೀಸರು ಶಬ್ಬೀರ್‌ಗೆ ಕರೆ ಮಾಡಿ ನಿಮ್ಮ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

10-15 ವರ್ಷಗಳಿಂದ ವಿದ್ಯಾರ್ಥಿಗಳ ಹಕ್ಕುಗಳು, ರೈತ ಮತ್ತು ಕಾರ್ಮಿಕ ಸಂಘಟನೆಗಳ ಮೂಲಕ ಬಡವರು, ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಡುತ್ತಿರುವ ಇವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಜಾಲಹಳ್ಳಿ ಪೊಲೀಸ್ ಅಧಿಕಾರಿಗಳು ಏಕಾಏಕಿ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯ ಉದ್ದೇಶಕ್ಕಾಗಿ ಕಾನೂನು ಬಾಹಿರವಾಗಿ ಸುಳ್ಳು ಗೂಂಡಾ ಪ್ರಕರಣ ದಾಖಲಿಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಪ್ರಮುಖರಾದ ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ನರಸಣ್ಣ, ಕರಿಯಪ್ಪ ಅಚ್ಚೊಳ್ಳಿ, ವೀರನಗೌಡ, ರವಿಕುಮಾರ್, ರಮೇಶ ಮೀರಾಪೂರ, ಶಬ್ಬೀರ್ ಮಹ್ಮದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net