ಕೋವಿಡ್ ಗೆದ್ದ 97 ವರ್ಷದ ವೃದ್ಧೆ

Raichur Sajanibhai Corona Victory
ಕರೊನಾ ಸೋಂಕಿನಿಂದ ಗುಣಮುಖರಾಗಿರುವ ರಾಯಚೂರು ನಗರದ 97 ವರ್ಷದ ಸಜಿನಿಬಾಯಿ ಜತೆಗೆ ಚಿಕಿತ್ಸೆ ನೀಡಿದ ಡಾ.ಬಸವರಾಜ ಪಾಟೀಲ್ ಇದ್ದಾರೆ.
Published on

ರಾಯಚೂರು: ನಗರದ 97 ವರ್ಷದ ವೃದ್ಧೆ ಸಜನಿಬಾಯಿ ಕರೊನಾ ಸೋಂಕಿನ ವಿರುದ್ಧ ಸೆಣಸಿ ಗೆಲುವು ಸಾಧಿಸಿದ್ದಾರೆ. ಇವರನ್ನು ಬಸವ ಆಸ್ಪತ್ರೆಗೆ ಏ. 20ರಂದು ದಾಖಲಿಸಲಾಗಿತ್ತು. ಡಾ.ಬಸವರಾಜ ಪಾಟೀಲ್ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾರೆ. ನಂತರ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕರೊನಾ ವಯೋವೃದ್ಧರಿಗೆ ಮಾರಣಾಂತಿಕ ಎನ್ನುವ ಮಾತುಗಳು ಇರುವ ನಡೆವೆಯೂ ಸಜಿನಿಬಾಯಿ ಕರೊನಾ ಗೆಲ್ಲುವ ಮೂಲಕ ಉಳಿದ ವೃದ್ಧ ಜೀವಗಳಿಗೆ ಆತ್ಮಸ್ಥೈರ್ಯ ಮೂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net