ಸರಳವಾಗಿ ಮುಗಿದ ಸೂಗೂರೇಶ್ವರ ರಥೋತ್ಸವ

20122020 Devasugur Rathotsava
Published on

ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನ ದೇವಸುಗೂರಿನ ಸೂಗೂರೇಶ್ವರ ಜಾತ್ರೆ ರದ್ದುಗೊಳಿಸಿದ್ದರಿಂದ ಭಾನುವಾರ ಬೆಳಗಿನ ಜಾವ ಸರಳ ರೀತಿಯಲ್ಲಿ ಜೋಡು ರಥೋತ್ಸವ ನೆರವೇರಿಸಲಾಯಿತು.

ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ವೀರಭದ್ರ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಪೂಜೆ ನೆರವೇರಿಸಿದ ನಂತರ ದೇವಸ್ಥಾನದ ಪ್ರಾಂಗಣದಲ್ಲಿ ಪಲ್ಲಕ್ಕಿ ಸೇವೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಗುತ್ತಿತ್ತು. ಪ್ರತಿವರ್ಷ ಜಾತ್ರೆ ನಿಮಿತ್ತ ಸಂಜೆ ಜೋಡು ರಥೋತ್ಸವ ನೆರವೇರಿಸಲಾಗುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಪಕ್ಕದ ತೆಲಂಗಾಣ, ಆಂಧ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ರದ್ದುಗೊಳಿಸಲಾಗಿದ್ದರೂ ಸರಳ ರೀತಿಯಲ್ಲಿ ಪೂಜೆ ಹಾಗೂ ರಥೋತ್ಸವ ನೆರವೇರಿಸುವ ಮೂಲಕ ಧಾರ್ಮಿಕ ವಿಧಿ, ವಿಧಾನಗಳನ್ನು ಪೂರೈಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net