ಬಡವರು, ಕೂಲಿ ಕಾರ್ಮಿಕರ ನೆರವಿಗೆ ಸಾರ್ವಜನಿಕರು ಮುಂದಾಗಲಿ : ಶಾಸಕ ಡಾ.ಶಿವರಾಜ ಪಾಟೀಲ್ ಮನವಿ

06042020 Raichur Foud Kit Supply
Published on

ರಾಯಚೂರು: ಕರೊನಾ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು, ಸಾರ್ವಜನಿಕರು ನೆರವು ನೀಡಲು ಮುಂದಾಗಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ನಿಜಲಿಂಗಪ್ಪ ಕಾಲನಿಯಲ್ಲಿ ನಗರಸಭೆ ಸದಸ್ಯ ಶರಣಬಸಪ್ಪ ಬಲ್ಲಟಗಿ ಹಾಗೂ ಗಜಾನನ ಯುವಕ ಮಂಡಳಿ ವತಿಯಿಂದ ನೀಡಲಾದ ದಿನ ಬಳಕೆ ವಸ್ತುಗಳನ್ನು ಪೌರ ಕಾರ್ಮಿಕರಿಗೆ ಸೋಮವಾರ ವಿತರಣೆಮಾಡಿ ಮಾತನಾಡಿದರು.

ಸಂಕಷ್ಟದ ನಡುವೆಯೂ ಪೌರ ಕಾರ್ಮಿಕರು ಪ್ರತಿನಿತ್ಯ ನಗರದ ಸ್ವಚ್ಛತೆ ಕಾರ್ಯದಲ್ಲಿ ನಿರತರಾಗಿದ್ದು, ಅವರಿಗೆ ನಗರಸಭೆ ಸದಸ್ಯರು ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ. ಪೌರ ಕಾರ್ಮಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. 50 ಪೌರ ಕಾರ್ಮಿಕರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿ ಹಲವು ದಿನಬಳಕೆ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು. ನಗರಸಭೆ ಸದಸ್ಯ ಶರಣಬಸಪ್ಪ ಬಲ್ಲಟಗಿ, ಮುಖಂಡರಾದ ರವೀಂದ್ರ ಜಲ್ದಾರ್, ಸೋಮಶೇಖರ ಸ್ವಾಮಿ, ಪ್ರತಾಪರೆಡ್ಡಿ ಶಾವಂತಗೇರಿ, ನಗರಸಭೆ ನೈರ್ಮಲ್ಯ ನಿರೀಕ್ಷಕ ಅಮರೇಶ ಹಾಗೂ ಗಜಾನನ ಯುವಕ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net