ಡಿಸಿ ಕಚೇರಿಗೂ ತಟ್ಟಿದ ಕರೊನಾ ಭೀತಿ…. ಮರದ ಕೆಳಗೆ ಇನ್‌ವಾರ್ಡ್ ಕೌಂಟರ್!

16032020 Raichur Carona effect to DC OFFice
Published on

ರಾಯಚೂರು : ಕರೊನಾ ಸೋಂಕು ಹರಡುವ ಭೀತಿ ಸರ್ಕಾರಿ ಕಚೇರಿಗಳಿಗೂ ತಟ್ಟಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಹೆಚ್ಚಿನ ಜನರು ಆಗಮಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕಚೇರಿ ಮುಂಭಾಗದ ಮರದ ಕೆಳಗೆ ಸೋಮವಾರ ಇನ್‌ವಾರ್ಡ್ ಕೌಂಟರ್ ಆರಂಭಿಸಲಾಗಿದೆ.

ಜನರು ತಮ್ಮ ಅಗತ್ಯ ಕೆಲಸ ಮತ್ತು ಕಾಗದ ಪತ್ರಗಳನ್ನು ನೀಡಲು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜತೆಗೆ ಮನವಿ ಸಲ್ಲಿಸಲು ಜನರು ಗುಂಪಾಗಿ ಕಚೇರಿಗೆ ಆಗಮಿಸುತ್ತಾರೆ. ಹೀಗಾಗಿ ಜನರು ಗುಂಪಾಗಿ ಒಗ್ಗೂಡುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ.

ಕಚೇರಿ ಮುಂಭಾಗದ ವಾಹನ ನಿಲುಗಡೆ ಮಾಡುವ ಸ್ಥಳದಲ್ಲಿನ ಗಿಡದ ಕೆಳಗೆ ಟೇಬಲ್ ಹಾಕಿ ಮೂವರು ಸಿಬ್ಬಂದಿ ನೇಮಕ ಮಾಡಲಾಗಿದ್ದು, ಸಿಬ್ಬಂದಿ ಮಾಸ್ಕ್ ಹಾಕಿಕೊಂಡು ಮನವಿ ಸ್ವೀಕರಿಸುವುದು ಹಾಗೂ ಪತ್ರಗಳನ್ನು ಪಡೆದು ಸೀಲ್ ಹಾಕಿ ನೀಡುವ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net