ಕರೊನಾ ಭೀತಿ ಮರೆತು ಓಡಾಟ, ಅಂಗಡಿಗಳ ಮುಂದೆ ಜನ ಸಂದಣಿ

03052021 Raichur road rush
Published on

ಅನಗತ್ಯ ರಸ್ತೆಗಿಳಿಯುತ್ತಿರುವ ಮಂದಿ

ರಾಯಚೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಆಕ್ಸಿಜನ್ ದೊರೆಯದೆ ಸೋಂಕಿತರು ಸಾಯುತ್ತಿದ್ದರೂ ಜನ ಕರೊನಾ ಭೀತಿ ಮರೆತು ಓಡಾಡುತ್ತಿರುವುದು ಕಂಡು ಬರುತ್ತಿದೆ.

ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನದ 12 ಗಂಟೆವರೆಗೆ ಸರ್ಕಾರ ಅವಕಾಶ ನೀಡಿದ ನಂತರವಂತೂ ಜನರ ಅನಗತ್ಯ ಸಂಚಾರ ಹೆಚ್ಚಾಗಿದೆ. ಕಿರಾಣಿ ಅಂಗಡಿ, ತರಕಾರಿ ಖರೀದಿಗೆ ಬರುವ ಜನ ಪರಸ್ಪರ ಅಂತರ ಕಾಪಾಡುವುದನ್ನು ಮರೆಯುತ್ತಿದ್ದಾರೆ. ಎಲ್ಲಲ್ಲಿ ಗುಂಪು ಸೇರುತ್ತಿದ್ದು, ಮಾಸ್ಕ್ ಕೂಡ ಧರಿಸುತ್ತಿಲ್ಲ.

ನಗರದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಹೆಚ್ಚಿನ ವಾಹನಗಳ ಓಡಾಟ ಕಂಡು ಬರುತ್ತಿತ್ತು. ಬಹುತೇಕ ಆಸ್ಪತ್ರೆ, ಬ್ಯಾಂಕ್ ಇನ್ನಿತರ ನೆಪಗಳನ್ನು ಒಡ್ಡಿ ರಸ್ತೆಗಿಳಿಯುತ್ತಿದ್ದರು. ಪ್ರಮುಖ ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದು ಕಂಡು ಬರುತ್ತಿತ್ತು. ಮಧ್ಯಾಹ್ನ 12ರ ನಂತರ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿ, ಹಲವು ವಾಹನಗಳನ್ನು ವಶಕ್ಕೆ ಪಡೆದರು. ಆದರೂ ಜನರ ಓಡಾಟ ಮುಂದುವರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net