ಗಣೇಶ ಚತುರ್ಥಿಗೆ ಭರ್ಜರಿ ಖರೀದಿ

21082020 Raichur Gangesh ustav
Published on

ರಾಯಚೂರು: ಕರೊನಾ ಹಿನ್ನೆಲೆಯಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಆತಂಕ ಎದುರಾಗಿದ್ದರೂ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗಾಗಿ ಶುಕ್ರವಾರ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಹೆಚ್ಚು ಜನರ ಕಂಡುಬಂದರು.

ಗಣೇಶ ಮೂರ್ತಿ ಖರೀದಿ ಜತೆ ತೋರಣ ಕಟ್ಟಲು ಮಾವಿನ ಎಲೆ, ಬಾಳೆ ಹಣ್ಣಿನ ದಿಂಡು ಕೊಳ್ಳುವುದು ಜೋರಾಗಿತ್ತು. ಜತೆಗೆ ಹೂವಿನ ಹಾರ ಸೇರಿದಂತೆ ಅಲಂಕಾರಿಕ ಸಾಮಗ್ರಿಗೆ ಅಂಗಡಿಗಳ ಮುಂದೆ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜನರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಆದ್ಯತೆ ನೀಡುತ್ತಿದ್ದರು. ಮಣ್ಣಿನಿಂದ ತಯಾರಿಸಿದ ಹಾಗೂ ರಸಾಯನಿಕ ಬಣ್ಣ ಬಳಸದ ಗಣೇಶ ಮೂರ್ತಿಗಳನ್ನು ಹೆಚ್ಚಾಗಿ ಕೊಳ್ಳುತ್ತಿದ್ದರು.

ಮಾರುಕಟ್ಟೆಯಲ್ಲಿ 150 ರೂ. ನಿಂದ 400 ರೂ.ವರೆಗೆ ಮಣ್ಣಿನಿಂದ ಸಿದ್ಧಪಡಿಸಿ ಗಣೇಶ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು. ಮೂರ‌್ನಾಲ್ಕು ದಶಕಗಳಿಂದ ಕುಟುಂಬ ಗಣೇಶ ಮೂರ್ತಿಗಳ ತಯಾರಿಯಲ್ಲಿ ತೊಡಗಿಸಿಕೊಂಡು ಕುಟುಂಬದ ಪುನೀತ್ ವರ್ಮಾ, ಮಣ್ಣಿನಿಂದ ತಯಾರಿಸಿದ ಆಕರ್ಷಕ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ಈ ಬಾರಿ ಕೇವಲ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಸಿದ್ಧಪಡಿಸಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net