ಜಿಲ್ಲಾದ್ಯಂತ ಸಂವಿಧಾನ ದಿನ ಆಚರಣೆ: ಸಾಮೂಹಿಕವಾಗಿ ಪೀಠಿಕೆ ವಾಚನ

26 Shashi 02
Published on

ರಾಯಚೂರು: ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಡಿಸಿ ಕೆ.ನಿತೀಶ ಭಾರತ ಸಂವಿಧಾನ ಪೀಠಿಕೆಯನ್ನು ಭೋಧಿಸಿದರು. ಇದಕ್ಕೂ ಮೊದಲು ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಡಿಸಿ ಶಿವಾನಂದ ಭಜಂತ್ರಿ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಚಿದಾನಂದ, ಆಹಾರ ಇಲಾಖೆಯ ಡಿಡಿ ಕೃಷ್ಣ ಶಾವಂತಗೇರಾ, ಪಶು ಸಂಗೋಪನೆ ಇಲಾಖೆಯ ಡಿಡಿ ಅಶೋಕ ಕೋಲ್ಕಾರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಶೈಲ ಕಾಚಾಪೂರ, ಸಿಡಾಕ್‌ನ ಜೆಡಿ ಜಿ.ಯು.ಹುಡೇದ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಎಡಿ ರಾಜೇಂದ್ರ ಜಾಲ್ದಾರ್, ಕೈಗಾರಿಕೆ ಇಲಾಖೆಯ ಜೆಡಿ ಬಸವರಾಜ ಯಂಕಂಚಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net