

ರಾಯಚೂರು: ದೇಶವು ನೂರಾರು ವರ್ಷಗಳ ಕಾಲ ತಾರತಮ್ಯವನ್ನು ಅನುಭವಿಸಿತ್ತು. ಸಂವಿಧಾನಕ್ಕಾಗಿ ದೊಡ್ಡ ಹೋರಾಟಗಳು ನಡೆದಿದ್ದು, ದೇಶದ ಪ್ರಜೆಗಳು ಸಂವಿಧಾನದವನ್ನು ಸಮರ್ಪಿಸಿಕೊಂಡ ನಂತರ ಪ್ರತಿಯೊಬ್ಬರು ಸ್ವತಂತ್ರೃವಾಗಿ ಬದುಕುವಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ನಗರದ ಮಾ ಆಶಾಪೂರಿ ಪಂಕ್ಷನ್ ಹಾಲ್‌ನಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟಿಸ್‌ನಿಂದ ಸಂವಿಂಧಾನ ಸನ್ಮಾನ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನುದ್ದೇಶಿಸಿ ಶುಕ್ರವಾರ ಮಾತನಾಡಿದರು.
ಸಂವಿಧಾನದ ವಿಚಾರವಾಗಿ ಸಮಾಜದಲ್ಲಿ ಮುಕ್ತವಾದ ಚರ್ಚೆಗಳಾಬೇಕಿವೆ. ಕಾಂಗ್ರೆಸ್ ಸಂವಿಧಾನ ದಿನವನ್ನು ಕಾನೂನಿನ ದಿನವೆಂದು ಮಾಡಿತ್ತು, ಪ್ರಸ್ತುತ ಸಂವಿಧಾನದ ಗಂಭೀರತೆಯನ್ನು ಮರೆತ ಕಾಂಗ್ರೆಸ್ ಅದನ್ನು ಹಗೂರವಾಗಿ ಪರಿಗಣಿಸಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದವರು ತಮ್ಮನ್ನು ತಾವು ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಧಿಗಾಗಿ ರಾಜ್‌ಘಾಟ್‌ನಲ್ಲಿ ಮೂರು ಅಡಿ ಜಾಗವನ್ನು ಅವರು ನೀಡಿರಲಿಲ್ಲ ಜತೆಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸಿಗಬೇಕಾದ ಮೀಸಲಾತಿಯನ್ನು ಕಾಂಗ್ರೆಸ್ ವಿರೋಧಿಸಿತ್ತು ಎಂದು ಹೇಳಿದರು.
ಇಂದಿರಾಗಾಂಧಿ ಪ್ರಧಾನಿ ಆಗಿದ್ದ ವೇಳೆ ಅಧಿಕಾರದಿಂದ ಕೆಳಗಿಳಿಯಲು ಅಲಹಾಬಾದ್ ಹೈಕೋರ್ಟ್ 1975 ರಲ್ಲಿ ತೀರ್ಪು ನೀಡಿತ್ತು. ಆದರೆ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡು. ದೇಶದಲ್ಲಿ ನಡೆಯುತ್ತಿದ್ದ ಕುರ್ಚಿ ಖಾಲಿ ಕರೋ ಆಂದೋಲನವನ್ನು ಆಂತರಿಕ ಗಲಭೆಯೆಂದು ಬಿಂಬಿಸಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಪ್ರಧಾನಿಯಾಗಿ ಮುಂದುವರೆದರು.
ತಿದ್ದುಪಡಿ ಎಂಬುವುದು ಸಂವಿಧಾನದ ಸೌಂದರ್ಯ ವಾಗಿದೆ. ಆದರೆ ಕೆಲವು ಅಂಶಗಳಿಗೆ ಸಾಮಾನ್ಯ ಬಹುಮತದ ಮೇಲೆ ತಿದ್ದುಪಡಿ ಮಾಡಬಹುದಾಗಿದೆ. ಅಧಿಕಾರಕ್ಕಾಗಿ ತಿದ್ದುಪಡಿ ಸಂವಿಧಾನದಲ್ಲಿ ತರುವುದು ಸರಿಯಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ಅರುಣ ಶಹಾಪುರ, ಶರಣು ತಳ್ಳಿಕೇರಿ, ಪ್ರಮುಖರಾದ ರವೀಂದ್ರ ಜಲ್ದಾರ್, ಎಂ.ವಿರೂಪಾಕ್ಷಿ, ರಾಘವೇಂದ್ರ ಉಟ್ಕೂರು, ಶಂಕರಗೌಡ ಮಿರ್ಜಾಪುರ ಸೇರಿದಂತೆ ಇತರರಿದ್ದರು.