ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಸಂಕಲ್ಪ ಮಾಡಿ, ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ ಮನವಿ

281221 Raichur Founding Day of Congress
ರಾಯಚೂರು ಜಿಲ್ಲಾ ಕಾಂಗ್ರೆಸ್ ಕಚೇರಯಲ್ಲಿ ಮಂಗಳವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ ಮಾತನಾಡಿದರು.
Published on

ರಾಯಚೂರು: ಕಾಂಗ್ರೆಸ್‌ನ ತತ್ತ-ಸಿದ್ಧಾಂತ ಹಾಗೂ ಜಾತ್ಯತೀತೆ ನಿಲುವಿನ ಬಗ್ಗೆ ಯುವಜನಾಂಗಕ್ಕೆ ಮಾಹಿತಿ ನೀಡುವ ಮೂಲಕ ಒಗ್ಗೂಡಿ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವಂತಾಗಬೇಕು. ಅವರನ್ನು ಕಡೆಸಿದಲ್ಲಿ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ ಎಂದರು.

ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ನಜೀರ್ ಪಂಜಾಬಿ ಮಾತನಾಡಿ, ಹಿರಿಯ ನಾಯಕರಿಂದಾಗಿ ಪಕ್ಷ ಹೆಮ್ಮರವಾಗಿದೆ. ಪಕ್ಷದ ಸಾಧನೆಗಳನ್ನು ಕಾರ್ಯಕರ್ತರು ಜನರಿಗೆ ಮುಟ್ಟಿಸಬೇಕು. ಪುನಃ ಅಧಿಕಾರಕ್ಕೆ ತರಲು ಪ್ರಯತ್ನ ನಡೆಸಬೇಕು ಎಂದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಜಿ.ಬಸವರಾಜರೆಡ್ಡಿ ಮಾತನಾಡಿ, ಇತ್ತೀಚೆಗೆ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮವಾಗಿ ಗೆಲುವು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಈ ಒಗ್ಗಟ್ಟು ಇರಬೇಕು ಎಂದರು.

ನಗರಸಭೆ ಅಧ್ಯಕ್ಷ ಇ.ವಿನಯಕುಮಾರ, ಮುಖಂಡರಾದ ಅಮರೇಗೌಡ ಹಂಚಿನಾಳ, ತಾಯಣ್ಣ ನಾಯಕ, ಸುಧೀಂದ್ರ ಜಾಗೀರದಾರ್, ಭೀಮನಗೌಡ ನಾಗಡದಿನ್ನಿ, ಶರಣಪ್ಪ ಪೂಜಾರಿ, ಪವನ ಪಾಟೀಲ್, ಜಿ.ಸುರೇಶ, ಅರುಣ ದೋತರಬಂಡಿ, ನಿರ್ಮಲಾ ಬೆಣ್ಣಿ, ಫಾತೀಮಾ ಹುಸೇನ್, ಶಶಿಕಲಾ ಭೀಮರಾಯ, ಚೇನತಕುಮಾರ, ವೈ.ಎನ್.ಶ್ರೀನಿವಾಸ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net