ಸಿಎಂ ರೇಸ್‌ನಲ್ಲಿ ಯಾರೂ ಇಲ್ಲ: ಎನ್.ಎಸ್.ಬೋಸರಾಜು

IMG_20241210_234051
Published on

ರಾಯಚೂರು: ವಿಜಯೇಂದ್ರನನ್ನು ನಾಲಾಯಕ್ ಎಂದು ರಮೇಶ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಹೇಳುತ್ತಿದ್ದಾರೆ. ಅದನ್ನು ಮೊದಲು ಸರಿಪಡಿಸಿಕೊಳ್ಳಲಿ ಆಮೇಲೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಜಯೇಂದ್ರ ಮಾತನಾಡಲಿ ಎಂದು ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಸಿಎಂ ರೇಸ್‌ನಲ್ಲಿ ಯಾರೂ ಇಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಕೇಳುತ್ತೇವೆ. ಮೊದಲಿನಿಂದಲೂ ಇದೇ ಪದ್ದತಿ ಬಂದಿದೆ. ಅದೇ ಪದ್ದತಿಯಲ್ಲಿ ಮುಂದುವರೆಯುತ್ತೇವೆ ಎಂದರು.

ಸಿದ್ದರಾಮಯ್ಯ ರಾಜಕೀಯ ಬಿಡುವುದಿಲ್ಲ. ಪವರ್ ಶೇರಿಂಗ್ ಬಗ್ಗೆ ಮಾತನಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಜನರ ಅಭಿಪ್ರಾಯದಿಂದಲೇ ನಡೆಯುತ್ತದೆ. ಮುಂದಿನ ಚುನಾವಣೆಗಳು ಕೂಡ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ನಡೆಯುತ್ತವೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಕ್ಫ್ ಕೂಡ ಮುಗಿದಿದೆ. ಚುನಾವಣೆಯೂ ಮುಗಿದಿದೆ. ಅವರ ಪಕ್ಷದ ಗೊಂದಲದಲ್ಲಿ ಅವರಿದ್ದರೆ ಬಿಜೆಪಿ ಪಕ್ಷವನ್ನು ಆರು ಬಾಗಿಲು ಮಾಡಿಕೊಂಡು ಕುಳಿತ್ತಿದ್ದಾರೆ. ಪ್ರತಿಯೊಬ್ಬರು ಸಹಕರಿಸಿದರೇ ಸದನ ನಡೆಸಲಿಕ್ಕೆ ಆಗುತ್ತದೆ. ಸದನದಲ್ಲಿ ಬಿಜೆಪಿಯವರ ಪ್ರಶ್ನೆಗಳಿಗೆ ಉತ್ತ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net