ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿ; ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಅನಿಸಿಕೆ ಆಯುರ್ವೇದ ದಿನಾಚರಣೆ

23102022 Raichur Ayurveda Day
Published on

ರಾಯಚೂರು: ಆಯುರ್ವೇದ ಔಷಧಗಳಿಂದ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಆದ್ದರಿಂದ ವ್ಯಕ್ತಿಯ ಸಮಗ್ರ ಆರೋಗ್ಯದ ಬೆಳವಣಿಗೆಗಾಗಿ ಆಯುರ್ವೇದ ಔಷಧ ಬಳಸಬೇಕೆಂದು ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಹೇಳಿದರು.

ನಗರದ ಮಕ್ಕಾ ದರವಾಜಾದಲ್ಲಿ ಜಿಲ್ಲಾಡಳಿತ ಭಾನುವಾರ ಹಮ್ಮಿಕೊಂಡಿದ್ದ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ಆಹಾರ ಹಾಗೂ ಔಷಧ ಪದ್ಧತಿಯಿಂದ ಆರೋಗ್ಯದ ಬೆಳವಣಿಗೆ ಜತೆಗೆ ಮಾನಸಿಕ ಸ್ವಾಸ್ತ್ಯವೂ ಸಾಧ್ಯ. ಆಯುರ್ವೇದ ಪ್ರಾಚೀನ ಕಾಲದ ಔಷಧ ಪದ್ಧತಿಯಾಗಿದ್ದು, ಒತ್ತಡ ನಿವಾರಣೆಗೆ ಪೂರಕವಾಗಿದೆ ಎಂದರು.

ಪ್ರಕೃತಿದತ್ತವಾದ ಆಹಾರ ಪದ್ಧತಿಯಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಜಿಲ್ಲಾ ಆಯುಷ್ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಲಲಿತಾ ಕಡಗೋಲ ಸಲಹೆ ನೀಡಿದರು.

ಡಿಸಿ ಎಲ್.ಚಂದ್ರಶೇಖರ ನಾಯಕ, ಡಿಎಚ್‌ಒ ಡಾ.ಸುರೇಂದ್ರಬಾಬು, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಶಂಕರಪಾಟೀಲ್, ಪೌರಾಯುಕ್ತ ಗುರುಲಿಂಗಪ್ಪ, ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಶಾಕೀರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net