ಜಿಲ್ಲಾದ್ಯಂತ ಕ್ರಿಸ್‌ಮಸ್ ಸಂಭ್ರಮ

25122022 raichur crismas
Published on

ರಾಯಚೂರು: ಜಿಲ್ಲಾದ್ಯಂತ ಯೇಸುಕ್ರಿಸ್ತರ ಜನ್ಮದಿನ ಕ್ರಿಸ್‌ಮಸ್ ಅನ್ನು ಭಾನುವಾರ ಆಚರಿಸಲಾಯಿತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.

ನಗರದ ಮೆಥೋಡಿಸ್ಟ್, ಅಗಾಪೆ, ಸೇಂಟ್ ಫ್ರಾನ್ಸಿಸ್, ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಜನರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೆಥೋಡಿಸ್ಟ್ ಚರ್ಚ್‌ನಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಕೇಕ್ ಕತ್ತರಿಸುವ ಮೂಲಕ ಕ್ರಿಸ್‌ಮಸ್ ಆಚರಣೆಗೆ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಜಯಣ್ಣ, ಡಿ.ಲಕ್ಷ್ಮೀ, ಪ್ರಮುಖರಾದ ರವಿ ಬೋಸರಾಜು, ದೇವಣ್ಣ ನಾಯಕ, ಬಿ.ನರಸರೆಡ್ಡಿ, ಸನ್ನಿ ರೋನಾಲ್ಡ್ ಹಾಗೂ ಕ್ರೈಸ್ತ್ ಧರ್ಮ ಗುರುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net