ರಾಯಚೂರು ತಾಲೂಕಿನ ಚಿಕ್ಕಸೂಗೂರು ಹತ್ತಿರದ ರೈಲು ಹಳಿಯ ಬಳಿ ರುಂಡವಿಲ್ಲದ ಶವ ಪತ್ತೆ

08122020 Raichur Murder
Published on

ರಾಯಚೂರು: ತಾಲೂಕಿನ ಚಿಕ್ಕಸೂಗೂರು ಹತ್ತಿರವಿರುವ ರೈಲು ಹಳಿಯ ಬಳಿ ರುಂಡವಿಲ್ಲದ ಭರತ್ ರೆಡ್ಡಿ (46) ಎಂಬಾತನ ಶವ ಮಂಗಳವಾರ ಪತ್ತೆಯಾಗಿದೆ. ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ನಗರದ ಭರತ್ ರೆಡ್ಡಿ ಎಂದು ತಿಳಿದು ಬಂದಿದೆ. ಶವ ಪತ್ತೆಯಾದ ಸ್ಥಳದ ಅಕ್ಕಪಕ್ಕದಲ್ಲಿಯೂ ರುಂಡ ಪತ್ತೆಯಾಗಿಲ್ಲ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net