ಕೆರೆಗೆ ರಸಾಯನಿಕ ಸುರಿಯುತ್ತಿದ್ದ ಟ್ಯಾಂಕರ್ ವಶಕ್ಕೆ

26072020 Raichur tanker lory
Published on

ರಾಯಚೂರು: ತಾಲೂಕಿನ ಮನ್ಸಲಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ರಸಾಯನಿಕ ತಂದು ಹಾಕುತ್ತಿದ್ದ ಟ್ಯಾಂಕರ್ ಅನ್ನು ಗ್ರಾಮಸ್ಥರು ಭಾನುವಾರ ಹಿಡಿದು, ಪೊಲೀಸರಿಗೆ ಒಪ್ಪಿಸಿದರು.

ಕೆಲವು ದಿನಗಳಿಂದ ಕೆರೆ ನೀರು ಬಳಕೆ ಮಾಡಿದ ಜನರಲ್ಲಿ ಆರೋಗ್ಯ ಸಮಸ್ಯೆ ಕಂಡು ಬರುತ್ತಿದ್ದು, ಕೆರೆ ನೀರಿನಿಂದ ಚರ್ಮ ತುರಿತ ಮತ್ತಿತರ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಅನುಮಾನ ಉಂಟಾಗಿತ್ತು. ಶನಿವಾರ ತಡರಾತ್ರಿ ಕೆರೆ ಹತ್ತಿರ ಟ್ಯಾಂಕರ್ ಕಂಡು ಬಂದಿದ್ದರಿಂದ ಪರಿಶೀಲನೆ ನಡೆಸಿದ ಗ್ರಾಮಸ್ಥರಿಗೆ ಟ್ಯಾಂಕರ್‌ನಲ್ಲಿನ ರಸಾಯನಿಕವನ್ನು ಕೆರೆಗೆ ಬಿಡುತ್ತಿರುವುದು ಗಮನ ಬಂದಿದೆ. ನಂತರ ಟ್ಯಾಂಕರ್ ಹಿಡಿದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಲವು ದಿನಗಳಿಂದ ಕೆರೆಯಲ್ಲಿನ ಮೀನುಗಳು ಕೂಡ ಸಾವಿಗೀಡಾಗಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರಿಂದ ಕೆರೆಗೆ ಕೈಗಾರಿಕೆಗಳಲ್ಲಿನ ಅನುಪಯುಕ್ತ ರಸಾಯನಿಕವನ್ನು ಕೆರೆಗೆ ತಂದು ಹಾಕುತ್ತಿರುವ ಅನುಮಾನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net