

ರಾಯಚೂರು: ಮುಡಾ ಹಗರಣ ವಿಚಾರದಲ್ಲಿ ಖಾಸಗಿ ವ್ಯಕ್ತಿ ಸಲ್ಲಿಸಿದ್ದ ದೂರನ್ನು ಪರಿಗಣಿಸಿ, ಹಗರಣದ ಕುರಿತು ಪರಿಶೀಲನೆ ನಡೆಸದೇ ಸಿಎಂ ಸಿದ್ದರಾಮಯ್ಯರ ಮೇಲೆ ಪ್ರಾಸಿಕ್ಯೂಷನ್ ವಿಚಾರಣೆಯ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡನೀಯವಾದದ್ದು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಸಿಎಂ ಪ್ರಾಸಿಕ್ಯೂಷನ್ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಇದೊಂದು ಸಂವಿಧಾನ ವಿರೋಧಿ ತೀರ್ಮಾನವಾಗಿದೆ ಎಂದರು.
ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಧ್ವನಿಯೆತ್ತದ ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದಲ್ಲದೇ, ಸರ್ಕಾರವನ್ನು ಅಸ್ತಿಗೊಳಿಸಲು ಬೀದಿಗಿಳಿಯುವ ಮಟ್ಟಿಗೆ ತಲುಪಿವೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತ ರಾಜ್ಯದ ಜನ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಆದ್ದರಿಂದ. ಹಿಂದಿನ ಸರ್ಕಾರಗಳಿಗಿಂತ ಬಿನ್ನ ಎಂಬುವುದನ್ನು ತೋರಿಸುವಲ್ಲಿ ಕಾಂಗ್ರೆಸ್ ಮುಂದಾಗಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಆಂಜಿನೇಯ್ಯ ಕುರುಬದೊಡ್ಡಿ, ಮಹ್ಮದ್ ಅಜ್ಮೀರ್, ಎಂ.ಆರ್ ಭೇರಿ, ಖಾಜಾ ಅಸ್ಲಾಂ ಸೇರಿದಂತೆ ಇತರರಿದ್ದರು.