ತಗ್ಗಿಗೆ ಉರುಳಿದ ಸಿಮೆಂಟ್ ಲಾರಿ; ಅದೃಷ್ಟವಶಾತ್ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

10012021 Raichur Lorry Accident
Published on

ರಾಯಚೂರು: ಸಿಮೆಂಟ್ ಚೀಲ ಸಾಗಿಸುತ್ತಿದ್ದ ಲಾರಿ ಭಾನುವಾರ ಬೆಳಗಿನ ಜಾವ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಅಸ್ಕಿಹಾಳ ಹತ್ತಿರದ ಕೋಲ್ಡ್ ಸ್ಟೋರೇಜ್ ಬಳಿ ತೆರಳುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಪಕ್ಕದ ದೊಡ್ಡ ತಗ್ಗಿಗೆ ಬಿದ್ದಿದ್ದು, ಬೀೀಳುವಾಗ ವಿದ್ಯುತ್ ತಂತಿ ತಗುಲಿದೆ. ತಗ್ಗಿನಲ್ಲಿ ಐದಾರು ಅಡಿ ನೀರು ನಿಂತಿದ್ದು, ವಿದ್ಯುತ್ ತಂತಿ ತುಂಡಾದಾಗ ವಿದ್ಯುತ್ ನಿಲುಗಡೆಯಾಗಿದ್ದರಿಂದ ಅನಾಹುತ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net