ವೃತ್ತಿ ಕಾರ್ಮಿಕರಿಗೆ ಸೌಲಭ್ಯ ದೊರೆಯಲಿ

Raichur Utsava
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ಶಾಮಿಯಾನಾ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ 4ನೇ ಮಹಾಧಿವೇಶನ ಮತ್ತು ರಾಯಚೂರು ಉತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆರ್. ಲಕ್ಷ್ಮ್ಮಣ, ಅರುಣ್ ಜೋಷಿ, ಸಂಸ್ಥಾಪಕ ಅಧ್ಯಕ್ಷ ಮಹಿಬೂಬ ಮುಲ್ಲಾ ವಿರೂಪಾಕ್ಷಪ್ಪ, ಸೈಯದ್ ಜಾಫರ್ ಖಾದ್ರಿ, ಹುಲಿಗೆಪ್ಪ, ಶ್ರೀಧರ, ಪಂಕಜ್ ಸೋಫಿಯಾ, ಅಜೀಜ್ ಅಹ್ಮದ್, ಅಶೋಕ ಚಾವ್ಲಾ, ಸೂರತ್ ಸಿಂಗ್ ಮಲ್ಹೋತ್ರಾ, ಮಂಜುನಾಥ, ಗುಂಡಯ್ಯ ಸ್ವಾಮಿ ಇದ್ದರು.
Published on

ರಾಯಚೂರು: ರಾಜ್ಯದಲ್ಲಿರುವ ಶಾಮಿಯಾನಾ ಡೆಕೋರೇಷನ್ ವೃತ್ತಿಯಲ್ಲಿರುವವರಿಗೆ ಕಾರ್ಮಿಕ ಇಲಾಖೆಯಡಿ ನೋಂದಣಿ ಮಾಡಿಸುವ ನಿಟ್ಟಿನಲ್ಲಿ ಸಂಘಟನೆ ಪ್ರಯತ್ನ ನಡೆಸಿದೆ.

ಆ ಮೂಲಕ ಈ ವೃತ್ತಿಯಲ್ಲಿ ಇರುವ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ಶಾಮಿಯಾನಾ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ ಹೇಳಿದರು.

ಭಾನುವಾರ ನಗರದ ಮಾತಾ ಕಲ್ಯಾಣ ಮಂಟಪದಲ್ಲಿ ಶಾಮಿಯಾನಾ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತ ಟೆಂಟ್ ಆ್ಯಂಡ್ ಡೆಕೋರೇಟ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಜಿಲ್ಲಾ ಶಾಮಿಯಾನಾ ಡೆಕೋರೇಟರ್ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 4ನೇ ಮಹಾಧಿವೇಶನ ಮತ್ತು ರಾಯಚೂರು ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಮಿಯಾನಾ ಡೆಕೋರೇಟರ್‌ಗಳಿಗೆ ಬೇಕಿರುವ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನೂ ರಾಯಚೂರು ಉತ್ಸವದ ವೇಳೆ ಆಯೋಜಿಸಿದ್ದು, ಬೇಕಿರುವ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಡೆಕೋರೇಟ್ ಶಾಮಿಯಾನ ಖರೀದಿಸಲು ಅವಕಾಶ ನೀಡಲಾಗಿದೆ. ಸರ್ಕಾರದಿಂದ ಸೌಲಭ್ಯ ಕೊಡಿಸಲು ಎಲ್ಲ ಅಗತ್ಯ ಪ್ರಯತ್ನ ಮಾಡಲಾಗುತ್ತದೆ ಎಂದರು.

ಈ ಸಂದರ್ಭ ಅರುಣ್ ಜೋಷಿ, ಸಂಸ್ಥಾಪಕ ಅಧ್ಯಕ್ಷ ಮಹಿಬೂಬ ಮುಲ್ಲಾ ವಿರೂಪಾಕ್ಷಪ್ಪ, ಸೈಯದ್ ಜಾಫರ್ ಖಾದ್ರಿ, ಹುಲಿಗೆಪ್ಪ, ಶ್ರೀಧರ, ಪಂಕಜ್ ಸೋಫಿಯಾ, ಅಜೀಜ್ ಅಹ್ಮದ್, ಅಶೋಕ ಚಾವ್ಲಾ, ಸೂರತ್ ಸಿಂಗ್ ಮಲ್ಹೋತ್ರಾ, ಮಂಜುನಾಥ, ಗುಂಡಯ್ಯ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net