ಕಾರು ಅಪಘಾತದಲ್ಲಿ ಮಹಿಳೆ ಸಾವು

19092022 Raichur Car Accident
Published on

ರಾಯಚೂರು: ಆಕಳ ಜೀವ ಉಳಿಸುವ ಚಾಲಕನ ಪ್ರಯತ್ನ ಮಹಿಳೆಯ ಪ್ರಾಣಕ್ಕೆ ಎರವಾಗಿದೆ. ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಅಡ್ಡ ಬಂದ ಆಕಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ರಸ್ತೆ ಪಕ್ಕ ಉರುಳಿ ಬಿದ್ದು, ಅದರಲ್ಲಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.

ಕೊಪ್ಪಳ ಜಿಲ್ಲೆ ಕಾರಟಗಿ ಹತ್ತಿರದ ಚೆನ್ನಳ್ಳಿ ಕ್ಯಾಂಪ್ ನಿವಾಸಿ ಶೈಲಜಾ (38) ಮೃತೆ. ತೀವ್ರವಾಗಿ ಗಾಯಗೊಂಡಿರುವ 13 ವರ್ಷದ ಬಾಲಕಿ ಲಕ್ಷ್ಮೀಯನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿದ್ದ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೈದರಾಬಾದ್‌ನಿಂದ ಚೆನ್ನಳ್ಳಿ ಕ್ಯಾಂಪ್‌ಗೆ ಹೋಗುವಾಗ ಮನ್ಸಲಾಪುರ ಕೆರೆ ಪಕ್ಕದ ಬೈಪಾಸ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net