ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೆಡಿಕಲ್​ ವಿದ್ಯಾರ್ಥಿಗಳ ದಾರುಣ ಸಾವು, ಇಬ್ಬರು ಗಂಭೀರ

Car Accident
Published on

ರಾಯಚೂರು: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ನಗರದ ಹೊರಲಯದ ಮಂತ್ರಾಲಯ ರಸ್ತೆ, ಮಂಜರ್ಲಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮೃತರನ್ನ ಅಭಿಷೇಕ, ಬಸವರಾಜು, ಗಣೇಶ ಗುರುತಿಸಲಾಗಿದ್ದು, ಸಿದಾರ್ಥ ಹಾಗೂ ಭೀಮರೆಡ್ಡಿ ಗಂಭೀರ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಗೊಂಡವರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಮೃತರು ಮತ್ತು ಗಾಯಗಳುಗಳು ಒಂದೇ ಕಾರಿನವರು ಎಂದು ತಿಳಿದುಬಂದಿದೆ. ಯರಗೇರಾದಿಂದ‌ ಬರುತ್ತಿದ್ದ ಕಾರು ಹಾಗೂ ರಾಯಚೂರಿನಿಂದ ಹೋಗುತ್ತಿದ್ದ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ.

ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿದೆ. ಯರಗೇರಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net