

ರಾಯಚೂರು: ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಬಸ್ ಟೈಯರ್ ಹರಿದು ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ತಾಲೂಕಿನ ನೆಲಹಾಳ ಕ್ಯಾಂಪ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.
ನೆಲಹಾಳ ಗ್ರಾಮದ ಭೀಮಾರ್ಜುನ(43) ಮೃತ. ನೆಲಹಾಳದಿಂದ ಗ್ರಾಮದಿಂದ ಕ್ಯಾಂಪ್ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಸವಾರನಿಗೆ ಹಿಂಬದಿಯಿಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ವಾಹನ ಸವಾರ ಕೆಳಗೆ ಬಿದ್ದಿದ್ದು, ತಲೆ ಮೇಲೆ ಬಸ್ ಟಯರ್ ಹತ್ತಿದ್ದರಿಂದ ತಲೆ ನುಜ್ಜು ಗುಜ್ಜಾಗಿ ಸ್ಥಳದಲ್ಲೆ ಪ್ರಾಣ ಬಿಟ್ಟಿದ್ದಾನೆ. ಈ ಕುರಿತು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.