

ರಾಯಚೂರು: ವಿಧಿಯ ಆಟ ಕೆಲವೊಮ್ಮೆ ಎಷ್ಟು ಘೋರವಾಗಿರುತ್ತದೆ ಎಂಬುದಕ್ಕೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದ ಘಟನೆಯೊಂದ ಉದಾಹರಣೆ ಆಗಿದೆ. ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ವರ ನಿನ್ನೆ ಸಂಜೆಯೇ ಕೊನೆಯುಸಿರೆಳೆದಿರುವುದು ವಿಧಿಯ ಕ್ರೂರತ್ವಕ್ಕೆ ಸಾಕ್ಷಿಯಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜವಳಗೇರಾ ಗ್ರಾಮದ ನಿವಾಸಿ ಹುಲುಗಪ್ಪ (36) ಇಂದು ಮದುವೆ ಮಂಟಪದಲ್ಲಿ ಹೊಸ ಬಾಳಿನ ನಿರೀಕ್ಷೆಯಲ್ಲಿ ಖುಷಿಯಲ್ಲಿರುತ್ತಿದ್ದ. ಆದರೆ, ನಿನ್ನೆ ಸಂಜೆ ಏಕಾಏಕಿ ಬಂದೆರಗಿದ ಹೃದಯಾಘಾತದಿಂದ ಹುಲುಗಪ್ಪ ಮೃತಪಟ್ಟಿದ್ದು, ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
ಮೃತ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯಿತಿಯಲ್ಲಿ ಎಸ್ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಸಿಂಧನೂರು ತಾಲುಕಿನ ಗೋರೆಬಾಳ ಗ್ರಾಮದ ಶರಣಬಸವೇಶ್ವರ ದೇಗುಲದಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ವಿಧಿಯಾಟದಲ್ಲಿ ಹುಲುಗಪ್ಪ ಅಸುನೀಗಿದ್ದು, ಜವಳಗೇರಾ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)