

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಮೃತಪಟ್ಟ ಬಾಲಕ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಗಮಕುಂಟಾ ಗ್ರಾಮದ ರಂಜೀತ ಕುಮಾರ ಬಾಲಕ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಮೃತಪಟಿದ್ದನು. ಕಾಲುವೆಗೆ ಫಿನ್ಸಿಂಗ್ ಹಾಕದಿರುವುದು ಘಟನೆಗೆ ಕಾರಣವಾಗಿತ್ತು. ಅ.8 ರಂದು ಸ್ಥಳೀಯ ತಹಸೀಲ್ದಾರ್, ಯಾಪಲದಿನ್ನಿ ಪೊಲೀಸರ ಸಮ್ಮುಖದಲ್ಲಿ ನಾರಾಯಣಪುರ ಬಲದಂಡೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಒಂದು ಕಿಮೀ ವ್ಯಾಪ್ತಿಯಲ್ಲಿ ಫಿನ್ಸಿಂಗ್ ಹಾಕಿ, ಮೃತ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಂದಿಗೂ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.