

ರಾಯಚೂರು: ಎಸ್‌ಎಸ್‌ಎಚ್ ಸಾಂಸ್ಕೃತಿಕ ಕಲಾ ಪ್ರಕಾಶನ ಸಂಘದ ವತಿಯಿಂದ ಜಾನಪದವೇ ಜ್ಞಾನಪದ ಪುಸ್ತಕ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜು.26ರ ಸಂಜೆ 6:00 ಗಂಟೆಗೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃತಿ ರಚನಕಾರ ಮಲ್ಲಣ್ಣ ಶಿವರಾಯಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಬುಧವಾರ ಮಾತನಾಡಿ, ಜಾನಪದವೇ ಜ್ಞಾನಪದ ಎನ್ನುವ ಕೃತಿ 26ರಂದು ಲೋಕಾರ್ಪಣೆಗೊಳ್ಳಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ.
ಕೃತಿ ಲೋಕಾರ್ಪಣೆಯನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಹತ್ತಿ ಗಿರಿಣಿ ಮಾಲಕರ ಸಂಘದ ಕಾರ್ಯದರ್ಶಿ ಸಾವಿತ್ರಿ ಪುರುಷೋತ್ತಮ ಅವರು ನೆರವೇರಿಸಲಿದ್ದಾರೆ. ಹಿರಿಯ ವಕೀಲ ಕೆ.ದೇವಣ್ಣ ನಾಯಕ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪಂಪಾಪತಿ, ಶ್ರೀನಿವಾಸ ಯಾದವ್, ಸುರೇಶ ಸೇರಿದಂತೆ ಇತರರಿದ್ದರು.