ರಕ್ತದಾನ ಮಾಡಿ ಜೀವ ಉಳಿಸಿ- ಐಎಂಎ ಕಾರ್ಯದರ್ಶಿ ಡಾ.ಹರ್ಷ ಪಾಟೀಲ್ ಸಲಹೆ

Dr Harsha Patil
ಡಾ.ಹರ್ಷ ಪಾಟೀಲ್
Published on

ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಮಾ.12ರಂದು ರಕ್ತದಾನ, ನೇತ್ರದಾನ ಮತ್ತು ದೇಹದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಐಎಂಎ ಕಾರ್ಯದರ್ಶಿ ಡಾ.ಹರ್ಷ ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಏಮ್ಸ್ ಹೋರಾಟ ಸಮಿತಿಯ 50 ಜನರು ರಕ್ತದಾನ, ನೇತ್ರದಾನ ಹಾಗೂ ಐವರು ದೇಹದಾನ ಮಾಡಲು ಮುಂದೆ ಬಂದಿದ್ದಾರೆ. ಐಎಂಎ ವತಿಯಿಂದ ನಿರಂತರವಾಗಿ ರಕ್ತದಾನ, ದೇಹದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು 18 ಯೂನಿಟ್ ರಕ್ತ ನೀಡಿ ಮಾದರಿಯಾಗಿದ್ದಾರೆ. ಕಳೆದ 300ಕ್ಕೂ ಹೆಚ್ಚು ದಿನಗಳಿಂದ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ಎಂಎಐ ಬೆಂಬಲವಿದೆ ಎಂದರು. ಡಾ.ಪವನ್ ಕಲ್ಕಿಮಠ, ಏಮ್ಸ್ ಹೋರಾಟ ಸಮಿತಿ ಪದಾಧಿಕಾರಿಗಳಾದ ಬಷೀರ್ ಅಹ್ಮದ್ ಹೊಸಮನಿ, ವಿಕ್ರಮ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net