

ರಾಯಚೂರು: ವಿರೋಧ ಪಕ್ಷದವರಿಗೆ ರಾಜ್ಯದ ಅಭಿವೃದ್ಧಿಯೂ ಬೇಕಿಲ್ಲ, ಅವರಿಗೆ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕಳೆದ ಐದು ವರ್ಷ ಬಿಜೆಪಿಯವರು ಏನು ಮಾಡಿದ್ದಾರೆ ಎಂಬುವುದನ್ನು ನೋಡಿಕೊಳ್ಳಬೇಕು. ಸದನ ನಡೆಯಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧಪಕ್ಷದವರು ಚರ್ಚೆಗಳನ್ನು ಮಾಡುತ್ತಾರೆ. ಕಲಬುರಗಿಯಲ್ಲಿ ನಡೆದ ಕ್ಯಾಬಿನೇಟ್ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಯೋಜನೆಗಳ ವಿಚಾರವಾಗಿ ಪ್ರಶ್ನೆಗಳನ್ನು ಕೇಳಲಿ ಉತ್ತರ ಕೊಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಮಾಡುವ ತೀರ್ಮಾನ ಹೈಕಮಾಂಡ್‌ಗೆ ಇದೆ. ವಿಜಯೇಂದ್ರ, ಕುಮಾರ ಸ್ವಾಮಿ ಅಥವಾ ಅಶೋಕ ಆಗಲಿ ತೀರ್ಮಾನ ಮಾಡುವ ಅಥವಾ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯ ಆಯ್ಕೆಗೆ ನಮಗೇ ಆದಂತ ಎಐಸಿಸಿ ಇದೆ. ನಮ್ಮಲ್ಲಿ ಗೊಂದಲವಿಲ್ಲ ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್ ಇಲ್ಲ ಎಂದು ಹೇಳಿದರು.
ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಅವರದ್ದೇ ಪಕ್ಷದಲ್ಲಿರುವ ನಾಯಕರ ವಿರುದ್ಧವ ಹೋರಾಟ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಪುರುಸೊತ್ತಿಲ್ಲ ಬಿಜೆಪಿ ಸರ್ಕಾರದ ವೇಳೆ ರಾಜ್ಯ ಎರಡುವರೆ ಸಾವಿರ ನೋಟಿಸ್ ನೀಡಿದ್ದಾರೆ.
ಮಂಡ್ಯದಲ್ಲಿ ಕುಮಾರ ಸ್ವಾಮಿ ಬೃಹತ ಸಮಾವೇಶವನ್ನು ಮಾಡಲು ನಿರ್ಧರಿಸಿದ್ದಾರೆ. ಯಾಕೆ ಸಭೆ ಮಾಡುತ್ತಾರೋ ಗೊತ್ತಿಲ್ಲ. ಜೆಡಿಎಸ್ ರಾಜಕೀಯ ಪಕ್ಷವಾಗಿದ್ದು, ಸಭೆ ಸಮಾವೇಶ ಮಾಡಲಿ ಅದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದರು.
ಸರ್ಕಾರದಿಂದ ಕಳಪೆ ತೊಗರಿ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ವೈಜ್ಞಾನಿಕ ಪರೀಕ್ಷೆ ಮಾಡಿಸಲಾಗಿದೆ, ಬೀಜ ಕಳಪೆಯಾಗಿಲ್ಲ ಎಂಬುವುದು ವರದಿಯಲ್ಲಿ ಬಂದಿದೆ. ವಾತವರಣ ಬದಲಾವಣೆಯಾಗಿದ್ದು, ಆ ಕಾರಣ ಕಾಳು ಕಟ್ಟಿಲ್ಲ ಎಂದು ವೈಜ್ಞಾನಿಕ ಪರೀಕ್ಷಾ ವರದಿಗಳಿಂದ ತಿಳಿದುಬಂದಿದೆ ಹೇಳಿದರು.