

ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ ಸಲಹೆ
ರಾಯಚೂರು: ಸ್ವಾತಂತ್ರೃ ಹೋರಾಟಗಾರ ಭಗತ್‌ಸಿಂಗ್‌ರ ಸದೃಢ ರಾಷ್ಟ್ರದ ಕನಸನ್ನು ನನಸಾಗುವ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ ಹೇಳಿದರು.
ಸ್ಥಳೀಯ ಭಗತ್‌ಸಿಂಗ್ ವೃತ್ತದಲ್ಲಿ ಮಂಗಳವಾರ ಎಐಡಿವೈಒದಿಂದ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರು ಭಾರತ ಬಿಟ್ಟು ತೊಲಗಿದರೆ ಸಾಲುವುದಿಲ್ಲ. ದೇಶವನ್ನು ಸದೃಢವಾಗಿ ಕಟ್ಟುವ ಕನಸನ್ನು ಭಗತ್‌ಸಿಂಗ್ ಹೊಂದಿದ್ದರು ಎಂದರು. ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮತನಾಡಿ, ಹಳೆಯ ವಿಚಾರಗಳನ್ನು ತರ್ಕದ ಒರೆಗಲ್ಲಿಗೆ ಹಚ್ಚಿನೋಡದೆ ಒಪ್ಪಿಕೊಳ್ಳಬಾರದು. ವಿಚಾರ ಸರಿಯಿದ್ದರೆ ಮಾತ್ರ ಒಪ್ಪಿಕೊಳ್ಳಿ ಎನ್ನುವ ಭಗತ್‌ಸಿಂಗ್‌ರ ವಿಚಾರಧಾರೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು.