

ರಾಯಚೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರವನ್ನು ಶೇ.12 ಹೆಚ್ಚಿಸಿ ಮಂಗಳವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದ್ದು, ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರು 55 ರೂ. ಹೆಚ್ಚು ಹಣ ನೀಡಬೇಕಾಗಿದೆ.
ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗ ರಾಯಚೂರಿನಿಂದ ರಾಜ್ಯದ ವಿವಿಧಡೆ ಸಂಚರಿಸುವ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿ ದರ ಪಟ್ಟಿ ಬಿಡುಗಡೆ ಮಾಡಿದ್ದು, ರಾಯಚೂರಿನಿಂದ ಬೆಂಗಳೂರಿಗೆ ಸಂಚರಿಸುವ ಸಾಮಾನ್ಯ ಬಸ್‌ಗೆ ಹಿಂದೆ 460 ರೂ. ಟಿಕೆಟ್ ದರವಿದ್ದರೆ ಪ್ರಸ್ತುತ 515 ರೂ.ಗೆ ಹೆಚ್ಚಿಸಲಾಗಿದೆ.
ರಾಯಚೂರಿನಿಂದ ಶಿವಮೊಗ್ಗಕ್ಕೆ 350 ರೂ.ಗಳಿಂದ -392 ರೂಗೆ ಹೆಚ್ಚಿಸಲಾಗಿದೆ, ದಾವಣಗೆರೆ 298-334 ರೂ., ಬಳ್ಳಾರಿಗೆ 170- 190 ರೂ., ವಿಜಯಪುರಕ್ಕೆ 245 -275 ರೂ., ಹೈದರಾಬಾದ್‌ಗೆ 235- 239 ರೂ, ಕಲಬುರಗಿ 164- 184 ರೂ., ಹೊಸಪೇಟೆಗೆ 170 - 190 ರೂ., ಕೊಪ್ಪಳಕ್ಕೆ 175 -196 ರೂ., ಗಂಗಾವತಿಗೆ 135 -152 ರೂ., ಲಿಂಗಸುಗೂರಿಗೆ 90- 100 ರೂ., ಸಿಂಧನೂರಿಗೆ 83- 95 ರೂ.ಗೆ ಹೆಚ್ಚಿಸಲಾಗಿದೆ ಇಲಾಖೆ ತಿಳಿಸಿದೆ.