ಬೆಂಗಳೂರಿನಲ್ಲಿ ಕ್ಷತ್ರಿಯ ಸಮಾವೇಶ ನಾಳೆ

27012023 raichur jayanthrao patang
Published on

ರಾಯಚೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.29ರಂದು ಬೆಳಗ್ಗೆ 10ಕ್ಕೆ ಕ್ಷತ್ರಿಯ ಸಮಾವೇಶ ಏರ್ಪಡಿಸಲಾಗಿದೆ. ಕ್ಷತ್ರಿಯ ಸಮುದಾಯದ 36 ಒಳ ಪಂಗಡದವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಜಯವಂತರಾವ್ ಪತಂಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಕ್ಷತ್ರಿಯ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಅಗತ್ಯ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಸಮಾವೇಶ ಆಯೋಜಿಸಲಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಉದಯ ಸಿಂಗ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಜಯವಂತರಾವ್ ಪತಂಗೆ ತಿಳಿಸಿದರು. ಪದಾಧಿಕಾರಿಗಳಾದ ಶ್ರೀನಿವಾಸ ಪತಂಗೆ, ನಾರಾಯಣರಾವ್, ಕೆ.ಸತ್ಯನಾರಾಯಣ, ಶಿವಶಂಕರಸಿಂಗ್, ಸುರೇಶಕುಮಾರ ಚಿತ್ರಗಾರ, ಅಶೋಕಕುಮಾರ, ಬಾಬುರಾವ್, ಶಿವರಾಮ ಸಿಂಗ್, ಸಿದ್ದರಾಮ ಸೂರ್ಯವಂಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net