KKRDBಯಿಂದ ಜಿಲ್ಲೆಯ ಲೇಖಕರ ಪುಸ್ತಕ ಖರೀದಿ ಮಾಡುವಂತೆ ಲೇಖಕರ ವೇದಿಕೆಯಿಂದ ಮನವಿ

Kkrdb
ರಾಯಚೂರಿನ ಡಿಸಿ ಕಚೇರಿ ಎದುರು ಜಿಲ್ಲಾ ಲೇಖಕರ ವೇದಿಕೆಯಿಂದ ಡಿಸಿಗೆ ಬರೆದ ಪತ್ರವನ್ನು ಎಡಿಸಿ ಶಿವಪ್ಪ ಯಲ್ಲಪ್ಪ ಭಜಂತ್ರಿಗೆ ಬುಧವಾರ ಸಲ್ಲಿಸಲಾಯಿತು. ವೀರಹನುಮಾನ, ಅಯ್ಯಪ್ಪಯ್ಯ ಹುಡಾ, ಈರಣ್ಣ ಬೆಂಗಾಲಿ,ಭಗತರಾಜ್ ನಿಜಾಂಕರ್, ಬಶೀರ್ ಆಹ್ಮದ್ ಹೊಸಮನಿ, ಯಲ್ಲಪ್ಪ ಮರ್ಚೇಡ್, ಬಾಬು ಭಂಡಾರಿಗಲ್, ನರಸಿಂಹಲು ವಡವಾಟಿ, ರಾಮಣ್ಣ ಬೋಯರ್ ಇದ್ದರು.
Published on

ರಾಯಚೂರು: ಜಿಲ್ಲೆಯ ಲೇಖಕರ ಪುಸ್ತಕಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖರೀದಿಸುವಂತೆ ಜಿಲ್ಲಾ ಲೇಖಕರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಎಡಿಸಿ ಶಿವಪ್ಪ ಯಲ್ಲಪ್ಪ ಭಜಂತ್ರಿಗೆ ಬುಧವಾರ ಡಿಸಿ ಕಚೇರಿ ಎದುರು ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಅನೇಕ ಸಾಹಿತಿಗಳು, ಲೇಖಕರು, ಕಥೆಗಾರರಿದ್ದು, ಪ್ರತಿ ವರ್ಷವೂ ಪುಸ್ತಗಳನ್ನು ಹೊರತರಲಾಗುತ್ತಿದೆ. ಆದರೆ ಪ್ರಕಟವಾದ ಪುಸ್ತಗಳನ್ನು ಮಾರಾಟ ಮಾಡುವ ಕೌಶಲವಿಲ್ಲದೇ ಲೇಖಕರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಗ್ರಂಥಾಲಯದಿಂದಲೂ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವೇದಿಕೆಯ ಪ್ರಮುಖರು ಅಸಮಧಾನ ಹೊರಹಾಕಿದರು.

ಕೆಕೆಆರ್‌ಡಿಬಿಯಿಂದ ಈ ಭಾಗದ ಲೇಖಕರಿಗೆ ಪ್ರೋತ್ಸಾ ಹ ನೀಡುವ ನಿಟ್ಟಿನಲ್ಲಿ ಸ್ಥಳೀಯರ ಪುಸ್ತಕಗಳನ್ನು ಖರೀದಿಸುವುದು ಅವಶ್ಯವಾಗಿದ್ದು, ಕಕ ಭಾಗದಲ್ಲಿ 1200ಕ್ಕೂ ಹೆಚ್ಚು ಗ್ರಾ.ಪಂ ಗ್ರಂಥಾಲಯಗಳಿದ್ದು, ಸ್ಥಳೀಯ ಲೇಖಕರ ಪುಸ್ತಗಳನ್ನು ಈ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ವೀರಹನುಮಾನ, ಅಯ್ಯಪ್ಪಯ್ಯ ಹುಡಾ, ಈರಣ್ಣ ಬೆಂಗಾಲಿ,ಭಗತರಾಜ್ ನಿಜಾಂಕರ್, ಬಶೀರ್ ಆಹ್ಮದ್ ಹೊಸಮನಿ, ಯಲ್ಲಪ್ಪ ಮರ್ಚೇಡ್, ಬಾಬು ಭಂಡಾರಿಗಲ್, ನರಸಿಂಹಲು ವಡವಾಟಿ, ರಾಮಣ್ಣ ಬೋಯರ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net