ಹಲ್ಲೆ ಮಾಡಿದವರನ್ನು ಗಡಿಪಾರುಗೊಳಿಸಲು ದಲಿತ ಮಹಾಸಭಾ ಆಗ್ರಹ

010122 Raichur Dalita Samiti Appeal
ರಾಯಚೂರು ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ದಲಿತ ಮಹಾಸಭಾದಿಂದ ಶನಿವಾರ ಮನವಿ ಸಲ್ಲಿಸಲಾಯಿತು.
Published on

ರಾಯಚೂರು: ಸಿಂಧನೂರು ತಾಲೂಕಿನ ಕುನ್ನಟಗಿಯಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಬೇಕು. ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ದಲಿತ ಮಹಾಸಭಾ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ಮಹಾಸಭಾ ನಿಯೋಗ ಶನಿವಾರ ಮನವಿ ಸಲ್ಲಿಸಿತು. ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು. ಕುನ್ನಟಗಿ ಗ್ರಾಮದಲ್ಲಿ ಖಾದರಪಾಷಾ, ಶ್ರೀಕಾಂತರೆಡ್ಡಿ ಸೇರಿದಂತೆ 30 ಜನರು ದಲಿತ ಹಿರೇಬಸಪ್ಪರ ಬಣವೆಗಳಿಗೆ ಗುರುವಾರ ಸಂಜೆ ಬೆಂಕಿ ಹಚ್ಚಿ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಹಿರೇಬಸಪ್ಪನ ಮಗನ ಕೊಲೆ ಪ್ರಕರಣದಲ್ಲಿ ಶ್ರೀಕಾಂತರೆಡ್ಡಿ ಆರೋಪಿಯಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ 8 ಜನರು 15 ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು. ಕೊಲೆ ದೂರಿನ ವೈಷಮ್ಯದಿಂದ ಗುರುವಾರ ಹಲ್ಲೆ ನಡೆಸಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿದವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪದಾಧಿಕಾರಿಗಳಾದ ಕೆ.ಇ.ಕುಮಾರ, ವೆಂಕಟೇಶ ಕಲ್ಲೂರಕರ್, ಪ್ರಾಣೇಶ, ಮಾರೆಪ್ಪ, ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net