ಎಪಿಎಂಸಿಯಲ್ಲಿ ತರಕಾರಿ ಸಗಟು ಮಾರಾಟ

02122022 raichur market president
Published on

ರಾಯಚೂರು: ನಗರದ ಎಪಿಎಂಸಿಯಲ್ಲಿ ಭಾನುವಾರದಿಂದ ತರಕಾರಿ ಸಗಟು ಮಾರಾಟ ಆರಂಭವಾಗಲಿದ್ದು, ತರಕಾರಿ ಮಾರಾಟಗಾರರಿಗೆ ಅನುಕೂಲವಾಗಲಿದೆ ಎಂದು ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಮಹಾವೀರ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಎಪಿಎಂಸಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು, ಅಧಿಕೃತ ಸೂಚನೆ ಹೊರಬೀಳುವ ಭರವಸೆಯಿದೆ. ಆಡಳಿತ ಮಂಡಳಿ ಕೊನೆಗೂ ನಿವೇಶನ ಹಂಚಿಕೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

2014ರಲ್ಲಿ ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನು ಹೊರತುಪಡಿಸಿ 54 ನಿವೇಶನಗಳನ್ನು ಹಂಚಿಕೆ ಮಾಡಲು ಎಪಿಎಂಸಿ ಆಡಳಿತ ಮಂಡಳಿ ಮುಂದಾಗಿದೆ. ಈಗ ತರಕಾರಿ ಸಗಟು ಮಾರಾಟಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ನಿವೇಶನ ಹಂಚಿಕೆ ಮಾಡುತ್ತಿರುವುದರಿಂದ ತರಕಾರಿ ಮಾರಾಟಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಎನ್.ಮಹಾವೀರ ಹೇಳಿದರು. ಪದಾಧಿಕಾರಿಗಳಾದ ಪ್ರಭುನಾಯಕ, ಉದಯಕುಮಾರ, ಎಂ.ಎಸ್.ಖಾನ್, ಬಸವರಾಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net