ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಜೆಡಿಎಸ್ ಒತ್ತಾಯ

17082020 Raichur JDS protest
Published on

ರಾಯಚೂರು: ಸುಗ್ರಿವಾಜ್ಞೆ ಮೂಲಕ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಒತ್ತಾಯಿಸಿ ಡಿಸಿ ಕಚೇರಿ ಮುಂದೆ ಜೆಡಿಎಸ್ ಜಿಲ್ಲಾ ಘಟಕ ಸೋಮವಾರ ಪ್ರತಿಭಟನೆ ನಡೆಸಿತು.

ಅಪರ ಜಿಲ್ಲಾಧಿಕಾರಿ ದುರಗೇಶ್‌ಗೆ ಮನವಿ ಸಲ್ಲಿಸಿ, ಹಿಂದಿನಂತೆ ಯಥಾಸ್ಥಿತಿ ಮುಂದುವರಿಸಲು ಒತ್ತಾಯಿಸಿತು. ಎಪಿಎಂಸಿಗಳನ್ನು ಮುಚ್ಚುವ ಹುನ್ನಾರವಿದೆ. ಮಾರುಕಟ್ಟೆಗಳ ಖಾಸಗೀಕರಣದಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಂತಾಗಲಿದೆ. ಮಾರುಕಟ್ಟೆಗಳ ಮೇಲೆ ಖಾಸಗಿ ಸಂಸ್ಥೆಗಳು ಹಿಡಿತ ಸಾಧಿಸಲಿವೆ. ಇದರಿಂದ ರೈತರ ಶೋಷಣೆಯಾಗಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಭೂಮಿಯಲ್ಲೇ ಕೂಲಿ ಮಾಡುವ ಸ್ಥಿತಿ ಎದುರಾಗಲಿದೆ. ಭೂ ಹಿಡುವಳಿ ಒಂದು ಕುಟುಂಬ 20 ಯೂನಿಟ್ ಮೀರಬಾರದು ಎಂದು ನಿರ್ಬಂಧನೆ ಹಾಕಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net