ವಾರ್ಷಿಕ ಸಾಲ ಯೋಜನಾ ವರದಿ ಪ್ರಕಟ; ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಬಿಡುಗಡೆ

31032021 Raichur ZP Annual Loan report
Published on

ರಾಯಚೂರು: ಜಿಲ್ಲೆಯ 2021-22ನೇ ಸಾಲಿನ ವಾರ್ಷಿಕ ಸಾಲ ಯೋಜನಾ ವರದಿಯನ್ನು ಜಿಪಂ ಸಭಾಂಗಣದಲ್ಲಿ ಸಿಇಒ ಶೇಖ್ ತನ್ವೀರ್ ಆಸೀಫ್ ಬುಧವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಆದ್ಯತಾ ವಲಯಕ್ಕೆ ಹೆಚ್ಚು ಸಾಲ ಕೊಡುತ್ತಿರುವುದು ಉತ್ತಮ ಬೆಳವಣಿಗೆ. ಈ ಅನುದಾನ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಲೀಡ್ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಬಾಬು ಬಳಗಾನೂರು ಮಾತನಾಡಿ, ಬೆಳೆಸಾಲ 3210 ಕೋಟಿ ರೂ., ಅಲ್ಪಾವಧಿ ಸಾಲ 900 ಕೋಟಿ ರೂ., ವ್ಯಾಪಾರ ಸಾಲ 1190 ಕೋಟಿ ರೂ., ಸೇವಾ ಕ್ಷೇತ್ರ 1040 ಕೋಟಿ ರೂ. ನಾನ್ ಪ್ರಿಯಾರಿಟಿ ಸಾಲ 200 ಕೋಟಿ ರೂ. ಸೇರಿ ಒಟ್ಟು 6540 ಕೋಟಿ ರೂ. ಯೋಜನೆ ಇದಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net