ವಿಷ್ಣುಕಾಂತ್ ಬೂತಡಾಗೆ ಪಂ.ತಾರಾನಾಥ ಪ್ರಶಸ್ತಿ

Parasamal Rushmani, Vishnukanth Boothad
ಪಾರಸಮಲ್ ಸುಖಾಣಿ, ವಿಷ್ಣುಕಾಂತ ಬೂತಡಾ.
Published on

ರಾಯಚೂರು: ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ತಾರಾನಾಥ ಶಿಕ್ಷಣ ಸಂಸ್ಥೆಯಿಂದ ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಶಿಲ್ಪಾ ಮೆಡಿಕೇರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಬೂತಡಾಗೆ ಪಂ.ತಾರಾನಾಥ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ ತಿಳಿಸಿದರು.

ಸ್ಥಳೀಯ ಎಲ್‌ವಿಡಿ ಕಾಲೇಜಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆ ಹೊಂದಿದೆ. ಪರಿಶ್ರಮದಿಂದ ಶಿಲ್ಪಾ ಮೆಡಿಕೇರ್ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ದೇಶ-ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆಸಿರುವ ವಿಷ್ಣುಕಾಂತ ಬೂತಡಾ ಜಿಲ್ಲೆಗೆ ಹೆಮ್ಮ ತರುವಂತಹ ಉದ್ಯಮಿಯಾಗಿದ್ದಾರೆ ಎಂದರು.

ಆ.12ರಂದು ಬೆಳಗ್ಗೆ 10.30ಕ್ಕೆ ಎಲ್‌ವಿಡಿ ಕಾಲೇಜಿನಿಂದ ಸ್ವಾತಂತ್ರೃದ ಸ್ವಾಭಿಮಾನಿ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು. ಶಿಕ್ಷಣದ ಜತೆಗೆ ಭಾತೃತ್ವ, ಸಹೋದರತ್ವ ಬೆಳೆಸುವ ನಿಟ್ಟಿನಲ್ಲಿ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.15ರಂದು ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಸ್ವಾತಂತ್ರೃ ಹೋರಾಟಗಾರರಾದ ಅಮರೇಶ ಪಾಟೀಲ್ ಆಲ್ಕೋಡ್, ಡಿ.ಪಂಪಣ್ಣ, ಕರ್ನಾಟಕ ಲಲಿತಕಲಾ ಅಕಾಡೆಮಿ ಫೆಲೋಶಿಪ್ ಪಡೆದಿರುವ ಚಿತ್ರ ಕಲಾವಿದ ಎಚ್.ಎಚ್.ಮ್ಯಾದಾರರನ್ನು ಸನ್ಮಾನಿಸಲಾಗುವುದು.

ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಉದ್ಘಾಟಿಸಲಿದ್ದಾರೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಾರಸಮಲ್ ಸುಖಾಣಿ ತಿಳಿಸಿದರು. ಸಂಸ್ಥೆ ಕಾರ್ಯದರ್ಶಿ ಶ್ರೀನಿವಾಸ ನಂದಾಪುರ, ಪದಾಧಿಕಾರಿಗಳಾದ ಅಂಬಾಪತಿ ಪಾಟೀಲ್, ತಿಪ್ಪಾರೆಡ್ಡಿ ಬಸ್ಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net