108 ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ

28082020 Raichur Ambulance Delevari
Published on

ರಾಯಚೂರು: ಕರೊನಾ ಸೋಂಕಿನಿಂದ ಗುಣಮುಖರಾಗಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ 108 ಆಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ.

ತಾಲೂಕಿನ ಮಂಜರ್ಲಾ ಗ್ರಾಮದ ಗರ್ಭಿಣಿಗೆ ಸೋಂಕು ತಗುಲಿದ್ದರಿಂದ 8ದಿನ ಯರಮರಸ್‌ನ ಕ್ವಾರಂಟೈನ್ ಕೇಂದ್ರದಲ್ಲಿದ್ದು, 4 ದಿನಗಳ ಕೆಳಗೆ ಮನೆಗೆ ಬಂದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬುಲೆನ್ಸ್‌ನಲ್ಲಿ ರಾಯಚೂರಿನ ಆಸ್ಪತ್ರೆಗೆ ಕರೆತರುತ್ತಿರುವಾಗ ಅಂಬೇಡ್ಕರ್ ವೃತ್ತದ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. 108 ಸಿಬ್ಬಂದಿ ಭೀಮರಾಯ ಮತ್ತು ಚಾಲಕ ಭೀಮಸೇನರಾವ್ ಆಕೆ ಮನೆಯವರ ನೆರವಿನೊಂದಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಇಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net