'ನಿನಗೆ ನೀನೇ ಗೆಳತಿ' ನಾಟಕ ಪ್ರದರ್ಶನ

BM Sharabendrayya Swami
ಬಿ.ಎಂ.ಶರಭೇಂದ್ರಯ್ಯ ಸ್ವಾಮಿ
Published on

ರಾಯಚೂರು: ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳೂರಿನ ಆಕರಂ ಮಹಿಳಾ ತಂಡದಿಂದ ನ.3ರಂದು ಸಂಜೆ 6ಕ್ಕೆ ನಿನಗೆ ನೀನೇ ಗೆಳತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಮುದಾಯ, ಭಗತ್ ಸಾಂಸ್ಕೃತಿಕ ಸೇವಾ ಸಂಘ, ರಂಗ ಕನಸು, ಕಸಾಪ ಸಹಯೋಗದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಡಾ.ಎಚ್.ಎಸ್.ವೆಂಕಟೇಶಮೂರ್ತಿ ರಚನೆ, ಡಾ.ಬಿ.ಎಂ.ಶರಭೇಂದ್ರಸ್ವಾಮಿ ನಿರ್ದೇಶನವಿದೆ ಎಂದರು. ರಂಗಕರ್ಮಿ ವಿ.ಎನ್.ಅಕ್ಕಿ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net