ರಾಯಚೂರಿಗೆ ಏಮ್ಸ್ ಘೋಷಣೆ ಮಾಡಲಿ

21mnv02
ಸುಭಾನ್‌ಬೇಗ್
Published on

ಮಾನ್ವಿ: ರಾಯಚೂರಿನಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟ ಒಂದು ಸಾವಿರಕ್ಕೂ ಹೆಚ್ಚು ದಿನ ಪೂರೈಸಿದ್ದು, ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಹೀಗಾಗಿ ಏ.22ರಂದು ಕರೆ ನೀಡಿರುವ ರಾಯಚೂರು ಬಂದ್‌ಗೆ ವೇದಿಕೆ ಬೆಂಬಲ ನೀಡಲಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಸುಭಾನ್‌ಬೇಗ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ರಾಯಚೂರಿಗೆ ಏಮ್ಸ್ ಘೋಷಣೆ ಮಾಡಬೇಕು. ಬೆಳಗಾವಿಯಲ್ಲಿ ಎಂಇಎಸ್ ನಿಷೇಧಿಸಬೇಕು, ಕಳಸಾ ಬಂಡೂರಿ ಮಹದಾಯಿ ಮತ್ತು ಮೇಕೆದಾಟು ಕುಡಿವ ನೀರಿನ ಯೋಜನೆ ಜಾರಿ ಮಾಡಬೇಕು. ಕಲ್ಯಾಣ ಕರ್ನಾಟಕ ಮತ್ತು ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನಿಡಬೇಕು.

ಹಿಂದಿಭಾಷೆ ಹೇರಿಕೆ ನಿಲ್ಲಿಸಬೇಕು. ಏಮ್ಸ್‌ಗಾಗಿ ಏ.22ರಂದು ಸಾರ್ವಜನಿಕರು, ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲಿಸಬೇಕು ಎಂದರು. ಪದಾಧಿಕಾರಿಗಳಾದ ಮುದುಕಪ್ಪ ನಾಯಕ, ಬಸವರಾಜ ನಿಲೋಗಲ್, ಶಾಂತಕುಮಾರ, ಶಿವುರಡ್ಡಿ, ಭೀಮಣ್ಣ, ರವಿ ಮದ್ಲಾಪುರ, ಹನುಮಂತನಾಯಕ, ಚಂದ್ರಶೇಖರ, ರಫೀ, ವೆಂಕಟೇಶ, ಸಿದ್ದಪ್ಪ ಮದ್ಲಾಪುರ, ದೀಪಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net